ಸಮಗ್ರ ನ್ಯೂಸ್: ಕೇರಳದ ಕೊಟ್ಟಾಯಂ ಪಾದಪ್ಪರಂನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 2 ವರ್ಷದ ಕಂದಮ್ಮ ಮೃತಪಟ್ಟಿದ್ದಾಳೆ.
ನಾಸೀರ್ ಮತ್ತು ರಮಶೀನಾ ದಂಪತಿಯ ಪುತ್ರಿ ಇಫಾ,ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಮತ್ತು ಎದುರಿನಿಂದ ಬಂದ ಟ್ಯಾಂಕರ್ ಲಾರಿ ಡಿಕ್ಕಿಯಾದಾಗ, ಏರ್ ಬ್ಯಾಗ್ ಬಾಲಕಿಯ ಮುಖಕ್ಕೆ ಬಡಿದು ಸೀಟ್ ಬೆಲ್ಟ್ ಕುತ್ತಿಗೆಗೆ ಸಿಕ್ಕಿಹಾಕಿಕೊಂಡ ಪರಿಣಾಮ, ಇಫಾ ಉಸಿರುಗಟ್ಟಿ ಮೃತಪಟ್ಟಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿಯ ತಂದೆ ಕೇವಲ ಎರಡು ದಿನಗಳ ಹಿಂದೆ ವಿದೇಶದಿಂದ ಬಂದಿದ್ದರು. ಭಾನುವಾರ ಬಾಲಕಿಯ ಪಿತೃಸೋದರನ ಮದುವೆ ನಡೆಯಬೇಕಿತ್ತು. ಈ ದುರಂತದಿಂದ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಅಪಘಾತದಲ್ಲಿ ಬೇರೆ ಯಾರಿಗೂ ಗಾಯಗಳಾಗಿಲ್ಲ ಎಂದು ಕೊಳ್ಳತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



























