ಅಂಕೋಲ ಗುಡ್ಡ ಕುಸಿತ ಪ್ರಕರಣ|ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಪತ್ತೆ

ಸಮಗ್ರ ನ್ಯೂಸ್: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಶನಿವಾರ ಮಧ್ಯಾಹ್ನ (ಸೆ.21) ಪತ್ತೆಯಾಗಿದೆ.

Ad Widget ... ..

ಮುಳುಗು ತಜ್ಞ ಈಶ್ವರ ಮಲ್ಪೆ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಲಾರಿ ಚಕ್ರ ಕಂಡು ಬಂದಿದೆ. ಲಾರಿ ತಲೆ ಕೆಳಗಾದ ಸ್ಥಿತಿಯಲ್ಲಿ ನೀರಿನಲ್ಲಿ ಮುಳುಗಿದ್ದು, ಲಾರಿ ಚಕ್ರಕ್ಕೆ ಈಶ್ವರ ಮಲ್ಪೆ ಹಗ್ಗ ಕಟ್ಟಿ ಬಂದಿದ್ದಾರೆ.

Ad Widget

ಜುಲೈ 16ರಂದು ನಡೆದಿದ್ದ ಗುಡ್ಡಕುಸಿತ ದುರಂತದಲ್ಲಿ ಕೇರಳ ಮೂಲದ ಲಾರಿ ನಾಪತ್ತೆಯಾಗಿತ್ತು. ಲಾರಿಯಲ್ಲಿದ್ದ ಚಾಲಕ ಅರ್ಜುನ ಸಹ ನಾಪತ್ತೆಯಾಗಿದ್ದರು. ಆ ವೇಳೆ ಹಲವು ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ತೀವ್ರ ನೀರಿನ ಸೆಳೆತದ ಕಾರಣದಿಂದ ಅಡ್ಡಿಯಾಗಿತ್ತು.

Leave a Comment

Your email address will not be published. Required fields are marked *