ಎತ್ತಿನಹೊಳೆ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಮೊದಲೇ ಕುಸಿದ ಚಪ್ಪರ

ಸಮಗ್ರ ನ್ಯೂಸ್: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ವಿತರಣಾ ಟ್ಯಾಂಕ್ 4ರಲ್ಲಿ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ದೊಡ್ಡನಗರ ವಿತರಣಾ ಟ್ಯಾಂಕ್ ಡಿಸಿ-3 ರಿಂದ ಹೆಬ್ಬನಹಳ್ಳಿ ಡಿಸಿ-4 ವರೆಗೆ ನೀರು ಪಂಪ್ ಮಾಡುವ ವ್ಯವಸ್ಥೆಗೆ ಸಿಎಂ ಮತ್ತು ಡಿಸಿಎಂ ಚಾಲನೆ ನೀಡಲಿದ್ದಾರೆ.

Ad Widget ... ..

ಆದರೆ ಗಂಗಾ ಪೂಜೆ ಮತ್ತು ಬಾಗೀನ ಅರ್ಪಣೆ ಕಾರ್ಯಕ್ರಮಕ್ಕೆ ನಿರ್ಮಿಸಿದ ಚಪ್ಪರ ಇಂದು ಉದ್ಘಾಟನೆಯ ಮೊದಲೇ ಮುರಿದು ಬಿದ್ದ ಘಟನೆ ನಡೆದಿದೆ.

Ad Widget

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ವೇದಿಕೆ ಎದುರಿಗೆ ನಿರ್ಮಿಸಿದ್ದ ಸಿಎಂ, ಡಿಸಿಎಂ ಹಾಗೂ ಸಚಿವರು ನಿಂತು ಬಾಗೀನ ಅರ್ಪಿಸಲು ಮಂಟಪಕ್ಕೆ ನಿರ್ಮಿಸಿದ್ದ ಹೂವಿನಿಂದ ಅಲಂಕಾರ ಮಾಡಿದ್ದ ಚಪ್ಪರ ಮುರಿದು ಬಿದ್ದಿದ್ದು ಉದ್ಘಾಟನೆಯ ಮುನ್ನವೇ ಈ ಘಟನೆ ನಡೆದಿದ್ದು ಸ್ಥಳೀಯರಲ್ಲಿ ಅಸಮಾಧಾನ ಉಂಟಾಗಿದೆ .

Leave a Comment

Your email address will not be published. Required fields are marked *