ಚಿಕ್ಕಪ್ಪನಿಂದಲೇ ಅತ್ಯಾಚಾರ| ದೂರು‌ ದಾಖಲು


ಮೂಡುಬಿದಿರೆ, ಆ.10: ಬಾಲಕಿಯ ಅತ್ಯಾಚಾರವೆಸಗಿದ ಆರೋಪದಡಿ ಆಕೆಯ ಚಿಕ್ಕಪ್ಪನನ್ನು ಪೊಕ್ಸೊ ಕಾಯ್ದೆಯಡಿ ಮೂಡುಬಿದಿರೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಕುಮಾರ್ (30) ಎಂದು ಗುರುತಿಸಲಾಗಿದೆ.

Ad Widget ... ..

ಬಾಲಕಿ ಸೋಮವಾರ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ್ದು ಆಗ ಜೊತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿದ್ದಾಳೆ. ಈ ವೇಳೆ ಆರೋಪಿ ತನ್ನ ಅಣ್ಣನ ಮಗಳನ್ನೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ.

Ad Widget

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *