ಟಿಬಿ ಡ್ಯಾಂ ಗೇಟ್ ಅಳವಡಿಕೆ ಮೊದಲ ಎಲಿಮೆಂಟ್ ಯಶಸ್ವಿ

ಸಮಗ್ರ ನ್ಯೂಸ್: ಕೊಚ್ಚಿ ಹೋಗಿದ್ದ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ ಆರಂಭಗೊಂಡಿತ್ತು. ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ವಿಫಲವಾಗಿತ್ತು. ನಿನ್ನೆ ರಾತ್ರಿ ಸತತ ಎರಡು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಬದಲಿಗೆ ಸ್ಟಾಪ್​ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ.

Ad Widget ... ..

ಮೊದಲ ಹಂತದ ಎಲಿಮೆಂಟ್ ಅಳವಡಿಕೆಯಲ್ಲಿ ತಂತ್ರಜ್ಞರು ತುಂಗಭದ್ರಾ ಡ್ಯಾಂನ 19ನೇ ಗೇಟ್ ನಲ್ಲಿ ತೊಡಗಿದ್ದರು. ಅದು ಯಶಸ್ವಿಯಾಗಿದದ್ದು, ರೈತರು ನಿರಾಳರಾಗುವಂತೆ ಮಾಡಿದೆ. ಇದೇ ಕಾರಣದಿಂದಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕರು, ಸಂಸದರು ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

Ad Widget

ಒಟ್ಟಾರೆಯಾಗಿ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಬದಲಿಗೆ ಸ್ಟಾಪ್​ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದ್ದರಿಂದ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಹೆಚ್ಚಾಗಿ ರೈತರು ನಿಟ್ಟುಸಿರುಬಿಡುವಂತಾಗಿದೆ.

Leave a Comment

Your email address will not be published. Required fields are marked *