Ad Widget .

ವಿಕ್ರಾಂತ್‌ ಯುದ್ದನೌಕೆ ಪರೀಕ್ಷಾರ್ಥ ಪ್ರಯೋಗ ಯಶಸ್ವಿ| ಸೇನಾವಲಯದಲ್ಲಿ ಐತಿಹಾಸಿಕ ‌ಮೈಲಿಗಲ್ಲು ಸಾಧಿಸಿದ ಭಾರತ|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನವದೆಹಲಿ: ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ (IAC) ವಿಕ್ರಾಂತ್ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. 40,000 ಟನ್​ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್​ ಯುದ್ಧನೌಕೆ ಯನ್ನು ತಯಾರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್​​ನಿಂದ ಭಾರತೀಯ ನೌಕಾಪಡೆಯನ್ನು ಸೇರಲಿದೆ.

Ad Widget . Ad Widget . Ad Widget .

ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ.
ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್​ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆ. ಇಡೀ ತಂಡದ ಶ್ರಮದಿಂದ ಇಂಥದ್ದೊಂದು ಮಹತ್ವದ ಕಾರ್ಯ ಸಾಧಿಸಲು ಸಾಧ್ಯವಾಗಿದೆ ಎಂದು ಎ.ಕೆ.ಚಾವ್ಲಾ ತಿಳಿಸಿದ್ದಾರೆ.

ಯುದ್ಧ ನೌಕೆಯ ಸಿಸ್ಟಂ ಪ್ಯಾರಾಮೀಟರ್​ಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿವೆ. ನೌಕೆಯ ಒಟ್ಟಾರೆ ಕಾರ್ಯಕ್ಷಮತೆ, ಹಲ್, ವಿದ್ಯುತ್​ ಉತ್ಪಾದನೆ, ಪೂರೈಕೆ ಸೇರಿ ಎಲ್ಲ ವಿಭಾಗಗಳನ್ನೂ ಪ್ರಯೋಗ ಹಂತದಲ್ಲಿ ಪರೀಕ್ಷಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ಈ ಯುದ್ಧನೌಕೆ 262 ಮೀಟರ್​ ಉದ್ದವಾಗಿದ್ದು, 62 ಮೀಟರ್​ ಅಗಲವಾಗಿದೆ. 59 ಮೀಟರ್​ ಎತ್ತರವಿದೆ. ಒಟ್ಟಾರೆ 14 ಡೆಕ್​ಗಳಿವೆ.

Leave a Comment

Your email address will not be published. Required fields are marked *