Ad Widget .

2025ರ ಏಷ್ಯಾಕಪ್‌ಗೆ ಭಾರತ ಆತಿಥ್ಯ

ಸಮಗ್ರ ನ್ಯೂಸ್‌: ಭಾರತವು 2025 ರ ಪುರುಷರ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕು ಪಡೆದಿದೆ. ಈ ಟೂರ್ನಿ 20 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಆರನೇ ತಂಡವನ್ನು ಅರ್ಹತಾ ಸುತ್ತಿನ ಮೂಲಕ ನಿರ್ಧರಿಸಲಾಗುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ IEOI ದಾಖಲೆಯ ಪ್ರಕಾರ, ಭಾರತವು 2025 ರಲ್ಲಿ ನಡೆಯಲ್ಲಿರುವ ಪುರುಷರ ಏಷ್ಯಾಕಪ್‌ಗೆ ಆತಿಥ್ಯ ವಹಿಸಲಿದೆ. ಈ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲ್ಲಿದೆ. ಅದೇ ಸಮಯದಲ್ಲಿ, 2027 ರ ಏಷ್ಯಾಕಪ್ ಆಯೋಜಿಸುವ ಹಕ್ಕನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದೆ. ಆದರೆ 2027ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಈ ಎರಡೂ ಆವೃತ್ತಿಗಳಲ್ಲೂ ತಲಾ 13 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ, ದಿನಾಂಕ, ಸ್ವರೂಪ ಮತ್ತು ಸ್ಥಳ ಸೇರಿದಂತೆ ಈ ಎಲ್ಲಾ ಮಾಹಿತಿಯನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕೂಡ ಬದಲಾಯಿಸಬಹುದು ಎಂದು ದಾಖಲೆಯಲ್ಲಿ ಹೇಳಲಾಗಿದೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *