ಶಿರೂರು ಗುಡ್ಡ ಕುಸಿತ ಪ್ರಕರಣ| ನಾಪತ್ತೆಯಾಗಿರುವ ಟ್ರಕ್‌ ಗಂಗಾವಳಿ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಭಾರೀ ಮಳೆಯಿಂದಾಗಿ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿಯಲ್ಲಿರುವುದು ಪತ್ತೆಯಾಗಿದೆ.

Ad Widget ... ..

ದುರಂತದಲ್ಲಿ ಒಟ್ಟು ಹತ್ತು ಜನರು ಮೃತಪಟ್ಟಿದ್ದು, ಈ ಪೈಕಿ ಕಾರ್ಯಾಚರಣೆ ಮೂಲಕ ಈವರೆಗೆ ಎಂಟು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿಯಲ್ಲಿ ಪತ್ತೆಯಾಗಿರುವ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Ad Widget

ದುರಂತ ಸಂಭವಿಸಿದ ಎಂಟು ದಿನಗಳು ಕಳೆದ ಬಳಿಕ ಟ್ರಕ್ ಪತ್ತೆಯಾಗಿದ್ದು, ಕಾರ್ಯಚರಣೆ ತೀವ್ರಗೊಂಡಿದೆ. ಆದರೆ, ಚಾಲಕ ಅರ್ಜುನ್ ಟ್ರಕ್​ನಲ್ಲಿ ಸಿಲುಕಿಕೊಂಡಿದ್ದಾರಾ ಅಥವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರಾ ಎನ್ನುವುದು ಇನ್ನು ತಿಳಿದುಬಂದಿಲ್ಲ. ಸದ್ಯಕ್ಕೆ ನದಿಯಿಂದ ಟ್ರಕ್​ ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.

Leave a Comment

Your email address will not be published. Required fields are marked *