ಫೋಕ್ಸೋ ಪ್ರಕರಣ ದಾಖಲಿಸಿದ್ದಕ್ಕೆ ‌6 ಮಂದಿಯ ಕಗ್ಗೊಲೆ

ಸಮಗ್ರ ನ್ಯೂಸ್: ಪೋಕ್ಸೋ ಪ್ರಕರಣ ದಾಖಲಿಸಿದ್ದಕ್ಕೆ ಆರೋಪಿ ಒಬ್ಬ ಆರು ಜನರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪೋಕ್ಸೋ ಕೇಸ್ ಆರೋಪಿಯಿಂದ ಆರು ಜನರ ಸಾಮೂಹಿಕ ಕೊಲೆ ನೆಡೆದಿದ್ದು ದೈವಲಗೂಡು ಗ್ರಾಮದಲ್ಲಿ 28 ವರ್ಷದ ರಾಜಕುಮಾರ ಎಂಬಾತನಿಂದ ಈ ಕೊಲೆ ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲಮ್ಮನ ದೈವಲಗೂಡ ಎಂಬಲ್ಲಿ ಈ ಒಂದು ಘಟನೆ ನಡೆದಿದ್ದು, ಆರೋಪಿ ರಾಜಕುಮಾರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪೋಕ್ಸೋ ಕೇಸ್ ನ ಅಪ್ರಾಪ್ತ ಬಾಲಕಿ, ಆಕೆಯ ತಾಯಿ, ಅಜ್ಜಿ, ತನ್ನ ಪತ್ನಿ ಸರಿತಾ, ಇಬ್ಬರೂ ಮಕ್ಕಳಿಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮೂರು ವರ್ಷದ ಮಗಳು ಹಾಗು ಎರಡು ವರ್ಷದ ಮಗನನ್ನು ರಾಜಕುಮಾರ್ ಕೊಂದಿದ್ದಾನೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಾಮೀನಿನ ಮೇಲೆ ಬಿಡುಗಡೆಯಾಗಿ ಆರು ಜನರನ್ನು ರಾಜಕುಮಾರ್ ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಹಿಂದೆ ಅಪ್ರಾಪ್ತ ಬಾಲಕಿ ತಂದೆಯನ್ನು ರಾಜಕುಮಾರ್ ಕೊಲೆ ಮಾಡಿದ್ದ. ಕಂಠಪೂರ್ತಿ ಮಧ್ಯ ಕುಡಿಸಿ ಬಾಲಕಿಯ ತಂದೆಯನ್ನು ಕೊಲೆ ಮಾಡಿದ್ದ. ಕೊಲೆಗೈದು ಹಾರ್ಟ್ ಅಟ್ಯಾಕ್ ಎಂದು ಆರೋಪಿ ರಾಜಕುಮಾರ್ ಬಿಂಬಿಸಿದ್ದ. ಈ ಬಗ್ಗೆ ದೂರು ನೀಡಿದ್ದರು ಕೂಡ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಕೇಳಿ ಬಂದಿತ್ತು. ಬಳಿಕ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ರಾಜ್ ಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದ ತಾಯಿಯನ್ನು ಕೊಲೆ ಮಾಡಬಹುದಾಗಿ ಬೆದರಿಕೆ ಹಾಕಿದ್ದ. ಇದೀಗ 6 ಜನರನ್ನು ಆರೋಪಿ ರಾಜಕುಮಾರ್ ಸಾಮೂಹಿಕವಾಗಿ ಕೊಲೆ ಮಾಡಿದ್ದಾನೆ.

Leave a Comment

Your email address will not be published. Required fields are marked *