ಮೊಮ್ಮಗಳ‌ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ?

Ad Widget ... ..

ಚೆನ್ನೈ: ಸುಮಾರು 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ 71 ವರ್ಷದ ಅಜ್ಜನಿಗೆ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳೇ ಸಹಾಯ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ.

Ad Widget

ಈ ಘಟನೆಗೆ ಸಂಬಂಧಿಸಿದಂತೆ ಗೀತಾ ರಾಣಿ ಮತ್ತು ಕೋಕಿಲಾ ಎಂಬ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇತ್ತೀಚೆಗೆ, ಅತ್ಯಾಚಾರ ಮಾಡಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆಗೆ ಒಳಪಡಿಸಿದಾಗ ಮೊಮ್ಮಗಳ ಗರ್ಭಪಾತ ಮಾಡಿಸಲು ಆತ ಹಿಂಸೆ ಕೊಡುತ್ತಿದ್ದ ವಿಚಾರಣೆ ತಿಳಿದುಬಂದಿತ್ತು. ಇಷ್ಟಾದರೂ ಈತನ ವಿರುದ್ಧ ಸಾಕ್ಷ್ಯಾಧಾರಗಳು ಇರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮಾಡಿದಾಗ ಭಯಾನಕ ಅಂಶ ಬೆಳಕಿಗೆ ಬಂದಿದೆ. ಅದೇನೆಂದರೆ ಈತ ಮೊಮ್ಮಗಳಿಗೆ ಗರ್ಭಪಾತ ಮಾಡಿಸಲು ಈ ಇಬ್ಬರು ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಲಂಚ ಕೊಟ್ಟಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ, ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಹೇಳಿದೆ.

Leave a Comment

Your email address will not be published. Required fields are marked *