ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊನೆಗೂ ಅಂತ್ಯಗೊಂಡ ಪ್ರತಿಭಟನೆ

ಸಮಗ್ರ ನ್ಯೂಸ್: ಜನರು ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಕ್ ಆಕ್ರಮಿತ ಕಾಶ್ಮೀರದ ನಡೆಸುತ್ತಿದ್ದ 5 ದಿನಗಳ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಅಂತ್ಯಗೊಂಡಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಜಮ್ಮು-ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಮುಖ್ಯಸ್ಥ ಶೌಕತ್ ನವಾಜ್ ಮೀರ್, ಪಾಕಿಸ್ತಾನ ಸರ್ಕಾರ 2300 ಕೋಟಿ ರು. ಅಭಿವೃದ್ಧಿ ಪ್ಯಾಕೇಜ್ ಪ್ರಕಟಿಸಿದ್ದು, ನಮ್ಮ ಬೇಡಿಕೆ ಈಡೇರಿಕೆಗೆ ಒಪ್ಪಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ. ಎಲ್ಲ ಪ್ರತಿಭಟನಾಕಾರರು ಹೋರಾಟ ಹಿಂಪಡೆದು ತಮ್ಮ ದೈನಂದಿನ ಚಟುವಟಿಕೆ ಆರಂಭಿಸಬೇಕು ಎಂದು ಹೇಳಿದ್ದಾರೆ.

Ad Widget ... ..

ಈ ಹಿಂಸಾತ್ಮಕ ಪ್ರತಿಭಟನೆ ಸೋಮವಾರ ಮೂವರು ಸೇರಿದಂತೆ ನಾಲ್ವರನ್ನು ಬಲಿ ಪಡೆದಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಿಒಕೆಯಾದ್ಯಂತ ಪಾಕ್ ವಿರುದ್ಧ ಹಾಗೂ ಭಾರತ ಪರ ಘೋಷಣೆ ಮೊಳಗಿದ್ದವು.

Ad Widget

Leave a Comment

Your email address will not be published. Required fields are marked *