ಸುಬ್ರಹ್ಮಣ್ಯ: ಮರ ಬಿದ್ದು ಮಹಿಳೆ ಸಾವು

ಸಮಗ್ರ ನ್ಯೂಸ್: ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಲ್ಕುಂದದಲ್ಲಿ ಮೇ15ರ ಸಂಜೆ ನಡೆದಿದೆ. ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ಮೀನಾಕ್ಷಿ ಎಂದು ಗುರುತಿಸಲಾಗಿದೆ.

Ad Widget ... ..

ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಹೋಗುವ ಸಂದರ್ಭದಲ್ಲಿ ಬೀಸಿದ ವಿಪರೀತ ಗಾಳಿ ಸಹಿತ ಮಳೆಗೆ ಮರ ಮುರಿದು ಬಿದ್ದಿದ್ದು, ಇದರಿಂದ ಅವರು ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Leave a Comment

Your email address will not be published. Required fields are marked *