ಸುಳ್ಯ: ಹಾವು ಕಚ್ಚಿದ ಮಹಿಳೆಯ ಚಿಕಿತ್ಸೆಯ ನೆರವಿಗೆ ಮನವಿ

ಸಮಗ್ರ ನ್ಯೂಸ್: ವಿಷದ ಹಾವೊಂದು ಕಚ್ಚಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಣ್ಣ ಮಗುವಿನ ತಾಯಿಯ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟವಾಗಿದ್ದು, ಚಿಕಿತ್ಸೆಗೆ ನೆರವು ನೀಡಬೇಕೆಂದು ಮನೆಯವರು ಮನವಿ ಮಾಡಿದ್ದಾರೆ.

Ad Widget ... ..

ಗುತ್ತಿಗಾರು ಗ್ರಾಮದ ಕಮಿಲ ಸಮೀಪದ ಹೊಳಕೆರೆ ಮನೆ ಜಗದೀಶ್ ಅವರ ಪತ್ನಿ ಅಶ್ವಿನಿಯವರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರ ಹಾವೊಂದು ಕಚ್ಚಿದೆ. ಇದರಿಂದ ತೀವ್ರ ಅಸ್ವಸ್ಥರಾದ ಅವರನ್ನು ಮಂಗಳೂರಿನ ‌ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Ad Widget

ಮಹಿಳೆಯ ಕಾಲನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಇದೀಗ ಚಿಕಿತ್ಸೆಗೆ ದಿನಕ್ಕೆ ಸುಮಾರು 70ಸಾವಿರ ಬೇಕಾಗುತ್ತದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಮಗುವಿನ ತಾಯಿಯಾಗಿರುವ ಈ ಮಹಿಳೆಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಬೇಕೆಂದು ಮನೆಯವರು ವಿನಂತಿಸಿದ್ದಾರೆ.

ಧನ ಸಹಾಯ ನೀಡುವವರು ಈ ಕೆಳಗಿನ ಖಾತೆಗೆ ಅಥವಾ ನೀಡಬೇಕಾಗಿ ವಿನಂತಿ.
JAGADEESH H.P.
ಖಾತೆ ಸಂಖ್ಯೆ: 83680100010772
IFSC ಕೋಡ್: BARB0VJDODD

Leave a Comment

Your email address will not be published. Required fields are marked *