ಮಾಜಿ ಕೇಂದ್ರ ಸಚಿವರ‌ ಪತ್ನಿ‌ ಬರ್ಬರ ಹತ್ಯೆ. ಮನೆ ದರೋಡೆ

ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ದಿವಂಗತ ಪಿ.ರಂಗರಾಜನ್ ಕುಮಾರಮಂಗಲಂ ಅವರ ಪತ್ನಿಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Ad Widget ... ..

ಕಿಟ್ಟಿ ಕುಮಾರಮಂಗಲಂ ಮೃತರು. 2000ರ ಆಗಸ್ಟ್​ 23ರಂದು ಪಿ.ರಂಗರಾಜನ್ ಮೃತಪಟ್ಟಿದ್ದರು. ಕಿಟ್ಟಿ ಕುಮಾರಮಂಗಲಂ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ದೆಹಲಿಯ ವಸಂತ ವಿಹಾರದಲ್ಲಿರುವ ಅವರ ನಿವಾಸದಲ್ಲಿ ಕಳೆದ ರಾತ್ರಿ ಹತ್ಯೆಗೀಡಾಗಿದ್ದು, ಇದುವರೆಗೆ ಓರ್ವ ಶಂಕಿತನನ್ನು ಬಂಧಿಸಿ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ನೈರುತ್ಯ ವಲಯ ಡಿಸಿಪಿ ತಿಳಿಸಿದ್ದಾರೆ.

Ad Widget

ನಿನ್ನೆ ರಾತ್ರಿ 8.30ರ ಸುಮಾರಿಗೆ ಲಾಂಡ್ರಿಮ್ಯಾನ್ ರಾಜು ಮನೆಗೆ ಬಂದಿದ್ದನು. ನಂತರ ಮತ್ತಿಬ್ಬರು ಬಂದು ನನ್ನನ್ನು ಕಟ್ಟಿಹಾಕಿ ಕಿಟ್ಟು ಅವರನ್ನು ಬರ್ಬರವಾಗಿ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ಲೂಟಿ ಮಾಡಿದ್ದಾರೆ ಎಂದು ಮನೆಗೆಲಸ ಮಾಡುತ್ತಿದ್ದ ಮಂಜು ಎಂಬಾಕೆ ಹೇಳಿದ್ದಾರೆ. ಮನೆಗೆಲಸದವರ ಹೇಳಿಕೆಯಂತೆ ಲಾಂಡ್ರಿಮ್ಯಾನ್ ನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *