ಮಂಗಳೂರು : ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮೋದಿ ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ.
ಮೂಲತ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕರಂದ್ಲಾಜೆ ದಿ. ಮೋನಪ್ಪ ಗೌಡ ಹಾಗೂ ಪೂವಕ್ಕ ದಂಪತಿಯ ಪುತ್ರಿಯಾದ ಕರಂದ್ಲಾಜೆ ಮೊದಲ ಭಾರಿಗೆ ಎಂಎಲ್‌ಸಿಯಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ರಾಜಕೀಯದಲ್ಲಿ ಹೋರಾಟದ ಮೂಲಕ ಹಂತ ಹಂತವಾಗಿ ಮೇಲೇರಿದರು. ಯಶವಂತಪುರದ ಶಾಸಕಿಯಾಗಿ ಯಡಿಯೂರಪ್ಪ ಸರ್ಕಾರದಲ್ಲಿ ಮೊದಲ ಬಾರಿ ಸಚಿವೆಯಾದರು. ಗ್ರಾಮೀಣಾಭಿವೃದ್ಧಿ, ಇಂಧನ ಸಚಿವೆಯಾಗಿ ಕರ್ತವ್ಯ ನಿರ್ವಹಿಸಿದರು.
ನಂತರ ರಾಜಕೀಯ ಅಸ್ಥಿರತೆ ಎದುರಾದಾಗ ಯಡಿಯೂರಪ್ಪರ ಜೊತೆ ಕೆಜೆಪಿಗೆ ಹೋಗಿ ನಂತರ ಬಿಜೆಪಿ ಬಂದ ಶೋಭಾ 2014 ರಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದರು. 2019ರಲ್ಲೂ ಅದೇ ಕ್ಷೇತ್ರದಿಂದ ಪುನರಾಯ್ಕೆಯಾದರು.
ಇದೀಗ ಒಕ್ಕಲಿಗ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗುತ್ತಿರುವಾಗ ಅದೇ ಸಮುದಾಯದ ಪ್ರಭಾವಿ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದ ಗೌಡರನ್ನು ಕೇಂದ್ರ ಸಚಿವ ಸಂಪುಟ ದಿಂದ ಹೊರಗಿಡುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನೂ ಪ್ರಸ್ತುತ ಸುದ್ದಿಯಲ್ಲಿರುವ ಗೌಡರ ಸಿ.ಡಿ ವಿಚಾರ ಈ ಎಲ್ಲಾ ಆಗುಹೋಗುಗಳಿಗೆ ಕಾರಣ ಎನ್ನುವಂತಾಗಿದೆ.





