ಹಿರಿಯ ನಟಿ ಹೇಮಾ ಚೌಧರಿಗೆ ತೀವ್ರ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಮಗ್ರ ಸಮಾಚಾರ: ಕನ್ನಡ ಚಿತ್ರರಂಗದ ಹಿರಿಯ ನಟಿಯಾದ ಹೇಮಾ ಚೌಧರಿ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೇಮಾ ಚೌಧರಿಗೆ ಬ್ರೇನ್ ಹ್ಯಾಮರೇಜ್ ಆಗಿದೆ ಎಂದು ತಿಳಿದು ಬಂದಿದೆ.

Ad Widget ... ..

ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್‌ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಅವರನ್ನು ಇಡಲಾಗಿದೆ. ಹೇಮಾ ಅವರ ಮಗ ಐರ್ಲೆಂಡ್​ನಲ್ಲಿ ಇದ್ದಾರೆ. ಅವರ ಆಗಮನಕ್ಕಾಗಿ ಹೇಮಾ ಕಾಯುತ್ತಿದ್ದಾರೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

Ad Widget

ಇತ್ತೀಚೆಗೆ ನಟಿ ಲೀಲಾವತಿ ಅವರು ನಿಧನ ಹೊಂದಿದರು. ಲೀಲಾವತಿಯವರ 11ನೇ ದಿನದ ಕಾರ್ಯಕ್ಕೆ ಹೇಮಾ ಅವರು ಆಗಮಿಸಿದ್ದರು. ವಿನೋದ್​ ರಾಜ್​ಗೆ ಸಾಂತ್ವನ ಹೇಳಿದ್ದರು. ಈಗ ಅವರಿಗೆ ಏಕಾಏಕಿ ಈ ರೀತಿ ಆಗಿದೆ.
70ರ ದಶಕದಲ್ಲೇ ಹೇಮಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಲೀಲಾವತಿ ಚೌಧರಿ ಕಿರುತೆರೆ ಲೋಕದಲ್ಲೂ ಮಿಂಚಿದರು. ಈಗ ಅವರಿಗೆ ಅನಾರೋಗ್ಯ ಉಂಟಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Leave a Comment

Your email address will not be published. Required fields are marked *