ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಮಾನವೀಯ ಘಟನೆ | ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿ

ಮಂಗಳೂರು: ನಗರದಲ್ಲಿ ಬೀದಿ ನಾಯಿಗಳ ಮೇಲೆ ಮಾನವನ ಅಟ್ಟಹಾಸ ಮುಂದುವರೆದಿದ್ದು, ನಾಯಿ ಒಂದಕ್ಕೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

Ad Widget ... ..

ನಗರದ ಶಿವಭಾಗ್ ನ ಆಭರಣ ಜುವೆಲ್ಲರ್ಸ್ ಹಿಂಭಾಗ ಇಂದು ಮುಂಜಾನೆ ನಾಯಿ ಮೃತದೇಹ ಪತ್ತೆಯಾಗಿದೆ. ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ಅದನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿ ದೇಹದೊಳಗೆ ಬುಲೆಟ್ ಪತ್ತೆಯಾಗಿದೆ.

Ad Widget

ಶಿವಭಾಗ್ ಪ್ರದೇಶದಲ್ಲಿ ನಿತ್ಯ ಓಡಾಡುತ್ತಿದ್ದ ಬೀದಿನಾಯಿ ಇದಾಗಿದೆ. ನಾಯಿಗೆ ಗುಂಡಿಕ್ಕಿ ಕೊಂದ ವಿಷಯ ತಿಳಿದು ಸ್ಥಳೀಯರು ಆತಂಕಿತರಾಗಿದ್ದಾರೆ. ಇನ್ನು ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಸಂಶಯ ವ್ಯಕ್ತವಾಗಿದೆ.

ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸಮಗ್ರ ತನಿಖೆಗೆ ಅನಿಮಲ್ ಕೇರ್ ಟ್ರಸ್ಟ್ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *