ಕೈಗೆಟುಕುವ ದರದಲ್ಲಿ ಸಿಗಲಿದೆ ರತನ್ ಟಾಟಾ ಅವರ ಕನಸಿನ ಕಾರು?

ಸಮಗ್ರ ನ್ಯೂಸ್: ಮಧ್ಯಮ ವರ್ಗದ ಜನರಿಗೆಂದೇ ತಯಾರಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟ್ಯಾಟೋ ನ್ಯಾನೋ ಒಂದು ಸಮಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Ad Widget ... ..

ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಟಾಟಾ ನ್ಯಾನೋ, ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರಾಗಿ ಮತ್ತೊಮ್ಮೆ ಮಾರುಕಟ್ಟೆಗೆ ವಿಶಿಷ್ಟ ಫೀಚರ್ಸ್​ಗಳೊಂದಿಗೆ ಬರಲು ಸಜ್ಜಾಗಿದೆ. ಆದರೆ, ಈ ಬಾರಿ ಎಲೆಕ್ಟ್ರಿಕ್​ ಎಂಬುದು ಮತ್ತಷ್ಟು ವಿಶೇಷ. ಟಾಟಾ ನ್ಯಾನೊದ ಹೊಸ ಅವತಾರವು ಕಡಿಮೆ ಬೆಲೆಯಲ್ಲಿ ನಂಬಲಾಗದ ವೈಶಿಷ್ಟ್ಯಗಳೊಂದಿಗೆ ತಯಾರಾಗುತ್ತಿದೆ. ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಈಗಾಗಲೇ ನ್ಯಾನೋ ಇವಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Ad Widget

ಇದು ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು ಎಂದು ಹೇಳಲಾಗಿದ್ದು, ಪೂರ್ಣ ಚಾರ್ಜ್‌ನಲ್ಲಿ ಸುಮಾರು 200 ಕಿ.ಮೀ ಮೈಲೇಜ್​ ಕೊಡಲಿದೆ ಎಂದು ವರದಿ ತಿಳಿಸಿದೆ. ಮಾಹಿತಿಯ ಪ್ರಕಾರ, ಟಾಟಾ ಮೋಟಾರ್ಸ್ 2025ರ ವೇಳೆಗೆ ಟಾಟಾ ನ್ಯಾನೋಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದು, ಇವಿ ಕಾರಿನ ಬೆಲೆ 5 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

Leave a Comment

Your email address will not be published. Required fields are marked *