ಸಮಗ್ರ ನ್ಯೂಸ್: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಮೂಲದ ನ್ಯೂಜಿಲೆಂಡ್‍ನ ಯುವ ಕ್ರಿಕೆಟಿಗ ರಚಿನ್ ರವೀಂದ್ರ ಐಸಿಸಿ ನೀಡುವ ಅಕ್ಟೋಬರ್ ತಿಂಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ
ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ರಚಿನ್ ರವೀಂದ್ರ, ಎಲ್ಲಾ 9 ಪಂದ್ಯಗಳನ್ನು ಆಡಿ ಮೂರು ಶತಕಗಳೊಂದಿಗೆ 565 ರನ್ನುಗಳನ್ನು ಬಾರಿಸಿ ಮಿಂಚಿದ್ದಾರೆ.
ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‍ನಲ್ಲಿ ಭಾರತದ ವೇಗಿ ಬುಮ್ರಾ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‍ಮನ್ ಕ್ವಿಂಟನ್ ಡಿ ಕಾಕ್ ಕೂಡ ಇದ್ದರು. ಮಹಿಳೆಯರ ವಿಭಾಗದಲ್ಲಿ ವೆಸ್ಟ್‍ಇಂಡೀಸ್‍ನ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ






