ಆಪರೇಷನ್ ಅಜಯ್/ 918 ಭಾರತೀಯರು ಮರಳಿ ಭಾರತಕ್ಕೆ

ಸಮಗ್ರ ನ್ಯೂಸ್: ಯುದ್ಧ ಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರುವ ಆಪರೇಷನ್ ಅಜಯ್ ನ ನಾಲ್ಕನೇ ವಿಮಾನ ಭಾರತ ತಲುಪಿದೆ. 274 ಪ್ರಯಾಣಿಕರನ್ನು ಹೊತ್ತ ವಿಮಾನ ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ವಿ.ಕೆ ಸಿಂಗ್ ಬರಮಾಡಿಕೊಂಡರು.

Ad Widget ... ..

ಅಕ್ಟೋಬರ್ 7 ರಂದು ಹಮಾಸ್ ದಾಳಿಕೋರರು ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಯ ನಂತರ ಇಸ್ರೇಲ್‌ನಲ್ಲಿ ಯುದ್ಧ ಆರಂಭವಾಗಿತ್ತು. ಹೀಗಾಗಿ ಅಕ್ಟೋಬರ್ 12 ರಂದು ಭಾರತೀಯರನ್ನು ಮತ್ತೆ ಭಾರತಕ್ಕೆ ಕರೆತರಲು ‘ಆಪರೇಷನ್ ಅಜಯ್ ಪ್ರಾರಂಭಿಸಲಾಯಿತು.

Ad Widget

ಆಪರೇಷನ್ ಅಜಯ್ ಮೂಲಕ ಇಲ್ಲಿಯವರೆಗೆ, ಒಟ್ಟು 918 ಭಾರತೀಯ ಪ್ರಜೆಗಳನ್ನು ಇಸ್ರೇಲ್‌ನಿಂದ ಭಾರತಕ್ಕೆ ಕರೆತರಲಾಗಿದೆ.

Leave a Comment

Your email address will not be published. Required fields are marked *