Ad Widget .

”ಚಪ್ಪಲಿಯಿಂದ ಪೆಟ್ಟು ತಿಂದವನ ಕೈಯಿಂದ ನಾನು ಬುದ್ದಿ ಕಲೀಬೇಕಿಲ್ಲ”| ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ವಿರುದ್ಧ ಗುಡುಗಿದ ತುಳು ವಾಗ್ಮಿ ತಮ್ಮಣ್ಣ ಶೆಟ್ಟಿ

ಸಮಗ್ರ ನ್ಯೂಸ್: ” ಒಬ್ಬ ಹೆಣ್ಣುಮಗಳಿಂದ ಚಪ್ಪಲಿಯಿಂದ ಪೆಟ್ಟು ತಿಂದು ಮರ್ಯಾದೆ ಕಳೆದುಕೊಂಡವನಿಂದ ನಾನು ಬುದ್ದಿ ಕಲಿಯಬೇಕಾದ ಅವಶ್ಯಕತೆ ಇಲ್ಲ. ನಿನ್ನ ಬಳಿ ನನ್ನ ಕುರಿತಾದ ದಾಖಲಿಗಳಿದ್ರೆ ನಿನ್ನ ಪೆಟ್ಟಿಗೆಯಲ್ಲಿ ಹಾಕಿ ತೋರಿಸು”. ಹೀಗೆ ಏಕವಚನದಲ್ಲೇ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯ ಚಳಿ ಬಿಡಿಸಿದ್ದು ತುಳು ವಾಗ್ಮಿ ತಮ್ಮಣ್ಣ ಶೆಟ್ಟಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯದ ಐವರ್ನಾಡಿನಲ್ಲಿ ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

Ad Widget . Ad Widget . Ad Widget .

”ಒಬ್ಬ ಹೆಣ್ಣುಬಾಕ, ಪಿಂಪ್, ಟ್ರಾವೆಲ್ ಏಜೆಂಟ್, ಭ್ರಷ್ಟ ಬಕೆಟ್ ಪತ್ರಕರ್ತ ಎನಿಸಿಕೊಂಡವನ ಬಗ್ಗೆ ಮಾತನಾಡುವ ಅನಿವಾರ್ಯತೆ ನನಗಿಲ್ಲ. ಸೌಜನ್ಯಳಿಗೆ ನ್ಯಾಯದ ಹೋರಾಟ ನೆಪದಲ್ಲಿ ಹೋರಾಟಗಾರರ ತೇಜೋವಧೆ ಮಾಡುವ ನಿನ್ನಂತವರು ಎಷ್ಟೇ ಜನ ಬಂದರೂ ಏನೂ ಸಾಧ್ಯವಾಗದು, ಸತ್ಯ ಯಾವತ್ತಿದ್ರೂ ಸತ್ಯವೇ. ನನ್ನ ಬಗ್ಗೆ ಮಾಡಿದ ಆರೋಪಗಳಿಗೆ ನೀನು ಸಾಕ್ಷಿ ತೋರಿಸು. ನಾನು ಭಾಷಣ ಮಾಡಿದ ಅಷ್ಟೂ ಕಡೆಗಳಲ್ಲಿ ಜನರ ಕಾಲು ಹಿಡಿದು ಬರುತ್ತೇನೆ. ನಿನ್ನ ಬಗೆಗಿನ ಆರೋಪಗಳಿಗೆ ನನ್ನ ಬಳಿ ಸಾಕ್ಷಿಯಿದೆ. ನಿನಗೆ ನನ್ನ ಚಾಲೆಂಜ್’ ಎಂದು ತಮ್ಮಣ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

‘ದೇವಸ್ಥಾನಗಳು ಜನರ ಕಷ್ಟಗಳಿಗೆ ನೆರವಾಗಬೇಕೇ ಹೊರತು ಜನರಿಗೆ ಕಷ್ಟ ನೀಡುವ ಕೇಂದ್ರಗಳಾಗಬಾರದು.‌ ನಾವು ಹಾಕಿದ ಹರಿಕೆ, ಕಾಣಿಕೆಗಳೇ ನಮಗೆ ತಿರುಗಿ ನಿಲ್ಲುತ್ತವೆ ಎಂದಾದರೆ ನಾವೇಕೆ ದೇವಸ್ಥಾನಗಳಿಗೆ ಹಣ ಹಾಕಬೇಕು?’ ಎಂದು ಶೆಟ್ಟಿ‌ ಹೇಳಿದರು.

Leave a Comment

Your email address will not be published. Required fields are marked *