ಸಮಗ್ರ ನ್ಯೂಸ್: ಇಂದಿನಿಂದ 2 ದಿನ ಭಾರತದ ನೆಲದಲ್ಲಿ ಐತಿಹಾಸಿಕ ಜಿ20 ಶೃಂಗಸಭೆ ನಡೆಯಲಿದ್ದು, ವಿಶ್ವದ ದಿಗ್ಗಜರು ದೆಹಲಿಗೆ ಆಗಮಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬಿಡೆನ್ ಸೇರಿದಂತೆ ಹಲವು ನಾಯಕರು ದೆಹಲಿಗೆ ಆಗಮಿಸಿದ್ದು, ಇಂದಿನಿಂದ ಐತಿಹಾಸಿಕ ಜಿ20 ಶೃಂಗಸಭೆ ನಡೆಯಲಿದೆ. ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ದೆಹಲಿಯ ಪ್ರಗತಿ ಮೈದಾನದಲ್ಲಿಸಭೆ ನಡೆಯಲಿದ್ದು,ಉಕ್ರೇನ್ ಯುದ್ಧದ ಪರಿಣಾಮಗಳು, ಬಡ ದೇಶಗಳ ಸಂಕಷ್ಟಗಳು, ಆರ್ಥಿಕ ಹಿಂಜರಿತದ ಸನ್ನಿವೇಶ ಮತ್ತು ಇತರ ಜಾಗತಿಕ ಸವಾಲುಗಳ ನಡುವೆಯೇ ದೆಹಲಿಯಲ್ಲಿ ಆಯೋಜನೆಗೊಂಡಿರುವ 2 ದಿನಗಳ ಜಿ20 ಶೃಂಗಸಭೆಗೆ ಇಂದು ಶನಿವಾರ ಚಾಲನೆ ಸಿಗಲಿದೆ.
ಇದೇ ಮೊದಲ ಬಾರಿಗೆ ಜಿ20 ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊ೦ಡಿದ್ದು, ಭಾರತದಲ್ಲಿ ನಡೆದ 200ಕ್ಕೂ ಹೆಚ್ಚು ಸಭೆಗಳ ಸಮಾರೋಪದ ರೀತಿಯಲ್ಲಿ ಶನಿವಾರ ಮತ್ತು ಭಾನುವಾರ ಶೃಂಗ ಸಭೆ ಆಯೋಜಿ ಸಲಾಗಿದೆ.
ಮುಂಬರುವ ಅಧ್ಯಕ್ಷೀಯ ಚುನಾವಣೆಯ ರೇಸ್ನಲ್ಲಿರುವ 80 ವರ್ಷದ ಬಿಡೆನ್ ಅವರು 2021 ರಲ್ಲಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ದೆಹಲಿಗೆ ಬಂದಿಳಿದಿದ್ದಾರೆ.







