ಸಮಗ್ರ ನ್ಯೂಸ್: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 30 ರಂದು “ರಕ್ಷಾಬಂಧನ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೇಖರ ನಾರಾವಿ ಇವರು ರಕ್ಷಾಬಂಧನದ ಮೌಲ್ಯಗಳನ್ನು ಮಕ್ಕಳಿಗೆ ಹೇಳಿದರು. ಪುಟಾಣಿ ಮಕ್ಕಳ ಕೈಯಲ್ಲಿ ರಕ್ಷೆಯನ್ನು ಕಟ್ಟಿಸಿ, ಮಕ್ಕಳಿಗೆ ಸಿಹಿ ತಿಂಡಿ ನೀಡಿ ಆಶೀರ್ವಾದಿಸಿದರು.
ಈ ಪುಟ್ಟ ಸಂಸ್ಥೆಯು ಒಂದು ಉತ್ತಮ ವಿದ್ಯಾಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಸಂಚಾಲಕರಾದ ಎ.ವಿ.ನಾರಾಯಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೇಖರ ನಾರಾವಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಮಳುವೇಲು, ಹಾಗೂ ಸಂಸ್ಥೆಯ ಖಜಾಂಚಿ ವನಿತಾ ಎ.ವಿ., ನಿರ್ದೇಶಕರಾದ ಗಂಗಾಧರ ಗೌಡ ಎ.ವಿ., ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಪ್ರೇಮಚಂದ್ರ ರವರು, ಸಂಸ್ಥೆಯ ಸಹಾಯಕ ನಾರಾಯಣ ಕುಲಾಲ್, ಭುವನೇಶ್ವರಿ, ಅಶ್ವಿನಿ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತಿಯಲ್ಲಿದ್ದರು. ಶಾಲೆಯ ಪುಟಾಣಿಗಳಾದ ನಿಷ್ಕಾ, ತನಿಷ್ಕ ಮತ್ತು ಶಿವಾನಿ ಇವರು ಪ್ರಾರ್ಥಿಸಿ, ಸಂಸ್ಥೆಯ ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್. ಸ್ವಾಗತಿಸಿ, ಸಂಸ್ಥೆಯ ಶಿಕ್ಷಕಿ ವನಿತಾ ವಂದಿಸಿ, ಯಶುಭ ರೈ ನಿರೂಪಿಸಿದರು.