ಸಮಗ್ರ ನ್ಯೂಸ್: ಮಡಿಕೇರಿ ನಗರದ ಚಿಕ್ಕಪೇಟೆಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಹಳೆಯ ಮರ್ಕರ ಕ್ಲಿನಿಕ್ ಜಾಗದಲ್ಲಿ ವರ್ಷಕ್ಕೆ ಮಾತ್ರ ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಳಿಗೆಯ ಖಾಯಂ ರೀತಿಯಲ್ಲಿ ಕಾಣುತ್ತಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ಈ ಸ್ಥಳದಲ್ಲಿ ಮಳಿಗೆಗಳಿಗೆ ಕೇವಲ ಒಂದು ವರ್ಷಕ್ಕೆ ಮಾತ್ರ ಅನುಮತಿ ಇದೆ. ಆದರೆ ಮಳಿಗೆಗಳ ನಿರ್ಮಾಣದ ತಂತ್ರಜ್ಞಾನಗಳು ಖಾಯಂ ಮಾಡಿದ ರೀತಿ ಕಾಣುತ್ತಿದೆ. ಮಳಿಗೆಯ ನಿರ್ಮಾಣದ ಸಮಯದಲ್ಲಿ ನಗರ ಸಭೆ ವತಿಯಿಂದ ಕೇವಲ ಆರು ಮಳಿಗೆಗಳಿಗೆ ಮಾತ್ರ ಅನುಮತಿ ಪಡೆದುಕೊಂಡು ಮಡಿಕೇರಿ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೇರವಾಗಿ ವಂಚಿಸಿ ಎಂಟು ಮಳಿಗೆಗಳ ನಿರ್ಮಾಣ ಮಾಡುತ್ತಿರುವುದು ಕಂಡು ಬರುತ್ತಿದೆ.
ಮಳಿಗೆ ನಿರ್ಮಾಣಕ್ಕೆ ಅನುಮತಿ ಪಡೆಯುವ ಸಂಧರ್ಭದಲ್ಲಿ ಅಧಿಕಾರಿಗಳು ಬೇಟಿ ನೀಡಿದ್ದರೇ ಹೊರತು ಮತ್ತೆ ನಗರಸಭೆಯ ಯಾವುದೇ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರು ಪರಿಶೀಲನೆಗೆ ಬಂದಿಲ್ಲ, ಇದಕ್ಕೆ ಕಾರಣ ಅವರ ಜೇಬು ಗಟ್ಟಿ ಮಾಡಿಕೊಂಡಿರಬಹುದು. ಮಡಿಕೇರಿ ನಗರದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ತೆರವು ಮಾಡಿಸುವ ನಗರಸಭೆಗೆ ಇವರುಗಳ ಮೇಲೆ ಕ್ರಮ ತೆಗೆದುಕೊಳ್ಳುವ ತಾಕತ್ತು ಇಲ್ಲವೇ, ಮಡಿಕೇರಿ ನಗರಸಭೆಯು ಉಳ್ಳವರ ಪರ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಒಂದು ನ್ಯಾಯ ಇವರುಗಳಿಗೆ ಒಂದು ನ್ಯಾಯ, ಮಳಿಗೆಗಳ ಮುಂಭಾಗದಲ್ಲಿ ಹಾಗೂ ಎಡ ಭಾಗದಲ್ಲಿ ರೋಡ್ ಮಾರ್ಜಿನ್ ಬಿಡದೆ ಮಳಿಗೆಯ ನಿರ್ಮಾಣ ಮಾಡಿರುವುದು ಕಂಡು ಬರುತ್ತಿದೆ. ಇದರ ಬಗ್ಗೆ ಮಡಿಕೇರಿ ನಗರಸಭೆಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆ 3ರಂದು ದೂರು ನೀಡಿದ್ದರು.
ಇದುವರೆಗೆ ಕ್ರಮ ತೆಗೆದುಕೊಳ್ಳದೆ ಇರುವುದು ಮಡಿಕೇರಿ ನಗರಸಭೆಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಕೆಲ ಸದಸ್ಯರು ಈ ಅಕ್ರಮದಲ್ಲಿ ಶಾಮಿಲ್ ಆಗಿರುವುದು ಕಂಡು ಬರುತ್ತಿದ್ದು, ಇದರ ಬಗ್ಗೆ ಪೂರ್ಣ ದಾಖಲಾತಿಗಳೊಂದಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.