ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ| ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿಗಳಿಂದ ಆದೇಶ

ಸಮಗ್ರ ನ್ಯೂಸ್: ಕೇರಳದ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಹಂದಿಗಳನ್ನು ಎರಡು ಫಾರ್ಮ್ಗಳಲ್ಲಿ ಕೊಲ್ಲಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Ad Widget ... ..

ಮಲೆಯಂಪಾಡಿನಲ್ಲಿ ಖಾಸಗಿ ಫಾರ್ಮ್ ನಲ್ಲಿ ಹಂದಿ ಜ್ವರ ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ನಂತರ, ಜಿಲ್ಲಾಧಿಕಾರಿಗಳು ಹಂದಿಗಳನ್ನು ಮಲೆಯಂಪಾಡಿಯಲ್ಲಿರುವ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಿದ್ದಾರೆ.

Ad Widget

ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶ ಮತ್ತು 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯವೆಂದು ಅಧಿಕೃತವಾಗಿ ಘೋಷಿಸಲಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹಂದಿ ಮಾಂಸದ ವಿತರಣೆ, ಮಾರಾಟ, ಸಾಗಣೆಯನ್ನು 3 ತಿಂಗಳವರೆಗೆ ನಿಷೇಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Leave a Comment

Your email address will not be published. Required fields are marked *