ಸಮಗ್ರ ನ್ಯೂಸ್: ನಟ ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್’ ದಾಖಲು ಮಾಡಲಾಗಿದೆ. ನಿನ್ನೆಯಿಂದ ಉಪೇಂದ್ರ ಅವರು ಮಾತನಾಡಿರುವ ವಿಡಿಯೋವೊಂದರಲ್ಲಿ ‘ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ’ ಅಂತ ಹೇಳಿದ್ದರು.
ಈ ಹೇಳಿಕೆಗೆ ಉಪೇಂದ್ರ ಅವರ ವಿರುದ್ದ ಆಕ್ರೋಶವನ್ನು ವಿವಿಧ ವರ್ಗದ ಜನತೆ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್ ಎನ್ನುವವರು ದೂರು ನೀಡಿದ್ದಾರೆ.
ಇನ್ನೂ ಇದೇ ವೇಳೆ ನಟ ಉಪೇಂದ್ರ ಅವರ ವಿರುದ್ದ ಸಿಕೆ ಅಚ್ಚುಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಅವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳವುಂತೆ ಸೂಚನೆ ಮನವಿ ಮಾಡಿದ್ದಾರೆ. ಇದೇ ವೇಳೆ ತಮ್ಮ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ಉಪೇಂದ್ರ ತಮ್ಮ ಮಾತಿನಿಂದ ಆಗಿರುವ ನೋವಿಗೆ ಸಾರಿ ಕೇಳಿದ್ದಾರೆ.