ಮದುವೆಗೆ ಮುನ್ನ ಸೆಕ್ಸ್ ಬಗೆಗಿನ ಮಾತುಗಳು ನಾರ್ಮಲ್…? | ತಂದೆಗೆ ಮಗಳು ಕೇಳಿದ ಪ್ರಶ್ನೆ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಅವರ ಪುತ್ರಿ ಆಲಿಯಾ ಕೇಳಿದ ಕೆಲವು ಪ್ರಶ್ನೆಗಳಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಮದುವೆಗೆ ಮುನ್ನ ಸೆಕ್ಸ್ ಬಗ್ಗೆಗಿನ ಮಾತುಗಳು ನಾರ್ಮಲ್? ಎಂಬ ಪ್ರಶ್ನೆಯನ್ನು ತಂದೆ ಗೆ ಕೇಳಿರುವ ವಿಡಿಯೋ ಸಾಮಾಜಿಕಜಾಲತಾಣಗಲ್ಲಿ ಬಾರಿ ವೈರಲ್ ಆಗಿದೆ.

Ad Widget ... ..

ಅನುರಾಗ್ ಕಶ್ಯಪ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಲಿಯಾ ತಂದೆಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಮದುವೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಕೇಳಿದ್ದಾಳೆ.

Ad Widget

ಮಗಳ ಪ್ರಶ್ನೆಗೆ ಉತ್ತರಿಸಿರುವ ಅನುರಾಗ್ ಕಶ್ಯಪ್, ಇದೆಂತಹ ಪ್ರಶ್ನೆ? 80ರ ದಶಕದಲ್ಲಿ ನಾವು ಈ ಪ್ರಶ್ನೆಗಳನ್ನು ಕೇಳುತ್ತಿದ್ದೀವಿ. ಈ ಪ್ರಶ್ನೆಯಿಂದ ಮುಂದೆ ಹೋಗೋಣ ಎಂದು ಉತ್ತರ ನೀಡಿದ್ದಾರೆ. ನಾವು ಕಾಲೇಜಿನಲ್ಲಿದ್ದಾಗ ಈ ರೀತಿಯ ಪ್ರಶ್ನೆಗಳನ್ನು ಕೇಳುತಿದ್ದದು ಅಲ್ಲದೆ, ನಾವು ಬೇರೆಯವರಿಗೆ ಈ ಬಗ್ಗೆ ಉಪದೇಶ ಸಹ ನೀಡುವ ಪ್ರಯತ್ನ ಮಾಡುತ್ತಿದ್ದೇವು ಎಂದು ತಂದೆ ಹೇಳಿದಾಗ, ಮದುವೆಗೆ ಮುನ್ನ ಸೆಕ್ಸ್ ಬಗ್ಗೆಗಿನ ಮಾತುಗಳು ನಾರ್ಮಲ್? ಎಂದು ಮರುಪ್ರಶ್ನೆ ಹಾಕಿದ್ದಾಳೆ. ಸದ್ಯ ಸಮಯ ಸಾಕಷ್ಟು ಬದಲಾಗಿದೆ. ಈ ವೇಳೆ ಇಂತಹ ಪ್ರಶ್ನೆಗಳು ಅವಶ್ಯ ಅಲ್ಲ ಎಂದು ಅನುರಾಗ್ ಕಶ್ಯಪ್ ಮಾತು ಬದಲಿಸಿದ್ದಾರೆ.

Leave a Comment

Your email address will not be published. Required fields are marked *