ಸಮಗ್ರ ನ್ಯೂಸ್: ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ (ರಿ.) ಇದರ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಇಂದು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ.
ಮಾಜಿ ಸಚಿವ ಎಸ್.ಅಂಗಾರ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸೇವೆ ಮಾಡುವುದು ಬದುಕಿನ ಪುಣ್ಯದ ಕಾರ್ಯ. ಇಂದು ಹಲವು ಎನ್.ಜಿ.ಒ.ಗಳು ಕೂಡ ಸೇವೆಯನ್ನು ಮಾಡುತ್ತದೆ. ಆದರೆ ಅವು ಅಪೇಕ್ಷೆಯನ್ನು ಇಟ್ಟುಕೊಂಡು ಸೇವೆ ಮಾಡುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ನಿಜವಾದ ಸೇವೆ ಎಂದರು. ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ನ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿದರು. ಮಣಿಪಾಲ ಎಂಐಟಿ ಪ್ರಾಚಾರ್ಯ ಡಾ.ನಾರಾಯಣ ಶೆಣೈ ಅವರು ಪ್ರಮುಖ ಭಾಷಣ ನೆರವೇರಿಸಿದರು. ಸುಳ್ಯ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ., ಸುಳ್ಯದ ದಿ.ಪುಟ್ಟಪ್ಪ ಜೋಶಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಕಾಮತ್, ಸುಳ್ಯ ಶ್ರೀ ಭಾಲಾವಲೀಕರ್ರಾಜಾಪುರ ಸಾರಸ್ವತ ಸಮಾಜಯ ಅಧ್ಯಕ್ಷ ಹೇಮಂತ್ ಕುಮರ್ ಕಂದಡ್ಕ, ಸಂಘ ಸಂಚಾಲಕ ಚಂದ್ರಶೇಖರ ತಳೂರು ಮತ್ತಿತರರು ಉಪಸ್ಥಿತರಿದ್ದರು. ಮನೋಜ್ ಕುಮಾರ್ ಎ.ಡಿ. ಸ್ವಾಗತಿಸಿದರು.