ಸಮಗ್ರ ನ್ಯೂಸ್: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶುಕ್ರವಾರ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಜಾವೆಲಿನ್ ಅನ್ನು 88.67 ಮೀಟರ್ ದೂರಕ್ಕೆ ಎಸೆಯುವ ಮೂಲಕ ದೋಹಾ ಡೈಮಂಡ್ ಲೀಗ್ 2023 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ದೋಹಾದ ಕತಾರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್ ಮೊದಲ ಪ್ರಯತ್ನದಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆದರು. ನೀರಜ್ ಅವರ ಈ ಮೊದಲ ಥ್ರೋ ಸ್ಪರ್ಧೆಯ ಅತ್ಯುತ್ತಮ ಎಸೆತವಾಗಿತ್ತು. ಆದರೆ, ಮತ್ತೊಮ್ಮೆ ನೀರಜ್ ಜಾವಲಿನ್ ಅನ್ನು ಇನ್ನೂ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಲಿಲ್ಲ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಜೆಕ್ ಆಟಗಾರ ಜಾಕೋಬ್ ವಡ್ಲೆಜ್ ಎರಡನೇ ಸ್ಥಾನ ಪಡೆದರು. ಗ್ರೆನಡಾದ ಆಯಂಡರ್ಸನ್ ಪೀಟರ್ಸ್ ಮೂರನೇ ಸ್ಥಾನ ಪಡೆದರು. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ ಅವರನ್ನು ಸೋಲಿಸಿ ಆಂಡರ್ಸನ್ ಪೀಟರ್ಸ್ ಚಿನ್ನ ಗೆದ್ದಿದ್ದರು.