ವಿಟ್ಲ: ಮರ ಬಿದ್ದು ವಿದ್ಯುತ್ ಕಂಬ ಕಟ್

ಸಮಗ್ರ ನ್ಯೂಸ್: ಮರ ತುಂಡಾಗಿ ಬಿದ್ದು, ಮೂರು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ವಿಟ್ಲದ ಕರೋಪಾಡಿ ಪಂಚಾಯತ್ ವ್ಯಾಪ್ತಿಯ ಸಾಯ ಎಂಬಲ್ಲಿ ಸಂಭವಿಸಿದೆ.

. Ad Widget . Ad Widget

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಸಮೀಪದ ತೋಟಗಳಿಗೆ ಭಾರೀ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸಿದ್ದಾರೆ.

. Ad Widget . . Ad Widget . Ad Widget

ಈ ಬಗ್ಗೆ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಕಂಬವನ್ನು ವೀಕ್ಷಿಸಿ ಹಾಗೆಯೇ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಯ ಎಂಬಲ್ಲಿ ವಿದ್ಯುತ್ ಲೈನ್‌ಗೆ ಬೀಳುವ ಸ್ಥಿತಿಯಲ್ಲಿ ಅನೇಕ ಮರಗಳಿದ್ದು, ಅಪಾಯದ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಕೂಡಲೇ ವಿದ್ಯುತ್ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *