ಕೊಕ್ಕಡ: ಮನೆಯಿಂದ ತಪ್ಪಿಸಿಕೊಂಡು ಬಂದ ಹಾಸನ ಮೂಲದ ವೃದ್ಧೆಗೆ ನೆರವಾದ ಯುವಕರು

ಸಮಗ್ರ ನ್ಯೂಸ್: ಮನೆ ಬಿಟ್ಟು ತಪ್ಪಿಸಿಕೊಂಡು ಬಂದ ಹಾಸನ ಮೂಲದ ವೃದ್ದೆಯೋರ್ವರಿಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಯುವಕರು ಸಹಾಯ ಹಸ್ತ ಚಾಚಿದ ಘಟನೆ ಎ.2ರಂದು ನಡೆದಿದೆ.

Ad Widget ... ..

ಕೊಕ್ಕಡ ಗ್ರಾಮದ ಆಲಂಬಿಲ ಎಂಬಲ್ಲಿ ಹಾಸನದ ವೃದ್ಧೆಯೋರ್ವರು ಕಾಣಿಸಿಕೊಂಡಿದ್ದಾರೆ. ವಿಚಾರಿಸಿದಾಗ ಈಕೆ ಮನೆಬಿಟ್ಟು ಬಂದಿದ್ದಾಗಿ ಗೊತ್ತಾಗಿದ್ದು, ವೃದ್ದೆಯ ಹೆಸರು ಬೋರಮ್ಮ ಎಂದು ತಿಳಿದುಬಂದಿದೆ.

Ad Widget

ಬಳಿಕ ಕೊಕ್ಕಡದ ಪ್ರಸಾದ್ ಆಲಡ್ಕ, ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ದೀಪಕ್ ಎಂಬವರು ಪೊಲೀಸರಿಗೆ ವಿಷಯ ತಿಳಿಸಿದ್ದು ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *