ಕೊಟ್ಟಿಗೆಹಾರ: ಒಡೆದ ಕೆಎಂಎಫ್ ಹಾಲು, ಸಾರ್ವಜನಿಕರ ಪರದಾಟ

Samagra news: ತಾಂತ್ರಿಕ ದೋಶದಿಂದ ಕೆಎಂಎಫ್ ನಿಂದ ಮೂಡಿಗೆರೆ ತಾಲೂಕಿನ ವಿವಿಧೆಡೆ ಸರಬರಾಜು ಆಗಿದ್ದ ಸಾವಿರಾರು ಲೀಟರ್ ಹಾಲು ವಾಪಾಸಾಗಿದ್ದು ಸಾರ್ವಜನಿಕರು ಪರದಾಡುವಂತಾಯಿತು.

Ad Widget ... ..

ಶುಕ್ರವಾರ ಬೆಳಿಗ್ಗೆ ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಕಳಸ, ಮಾಗುಂಡಿ, ನಿಡುವಾಳೆ ಸೇರಿದಂತೆ ಇನ್ನೀತರ ಕಡೆಗೆ ಶುಕ್ರವಾರ ಸರಬರಾಜು ಆಗಿದ್ದ ನಂದಿನಿ‌ ಹಾಲು ಒಡೆದು ಹೋದ ಪರಿಣಾಮ ಸ್ಥಳೀಯರು ಪರದಾಡುವಂತಾಯಿತು.

Ad Widget

ಯಂತ್ರದಲ್ಲಿ ಉಷ್ಣಾಂಶ ಹೆಚ್ಚಾದ ಕಾರಣ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದು ಕೆಎಂಎಫ್ ಕ್ವಾಲಿಟಿ ಅಧಿಕಾರಿ ನಟರಾಜ್ ಮಾಧ್ಯಮಗಳಿಗೆ ತಿಳಿಸಿದರು.

Leave a Comment

Your email address will not be published. Required fields are marked *