ಸಾರಿಗೆ ನೌಕರರಿಗೆ ಗುಡ್ ನ್ಯೂಸ್| ಕೊನೆಗೂ ವೇತನ ಹೆಚ್ಚಳ ಮಾಡಿದ ನಿಗಮ

ಸಮಗ್ರ ನ್ಯೂಸ್: ಕರ್ನಾಟಕ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸರ್ಕಾರದಿಂದ ವೇತನ ಹೆಚ್ಚಳ ಮಾಡಲಾಗಿದೆ. KSRTC, BMTC, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ ನೌಕರರಿಗೆ ವೇತನ ಹೆಚ್ಚಳವಾಗಿದೆ.

Ad Widget ... ..

ವೇತನ ಶ್ರೇಣಿಯನ್ನು ಶೇಕಡ 15ರಷ್ಟು ಏರಿಕೆ ಮಾಡಿದೆ. 2023ರ ಮಾರ್ಚ್ ತಿಂಗಳಿನಿಂದಾನೇ ಈ ಆದೇಶ ಜಾರಿಯಾಗಲಿದೆ. ಮೂಲ ವೇತನದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಬೇಕೆಂದು ನೌಕರರು ಒತ್ತಾಯಿಸಿದ್ದರು. ಮಾರ್ಚ್ 21ರಿಂದ ಮುಷ್ಕರಕ್ಕೆ ಕರೆ ನೀಡಿದ್ದರು. ಇದೀಗ ಶೇ.15 ರಷ್ಟು ವೇತನ ಹೆಚ್ಚಳ ಮಾಡಿ, ಆದೇಶ ಹೊರಡಿಸಿದೆ.

Ad Widget

ನೌಕರರು ಮುಷ್ಕರಕ್ಕೆ ಕರೆ ನೀಡಿದಾಗ ಸಚಿವ ಶ್ರೀರಾಮುಲು, ಭರವಸೆ ನೀಡಿದ್ದರು. ಸಾರಿಗೆ ನಿಗಮದ ಮೇಲೆ ಸುಮಾರು ಐದು ಲಕ್ಷ ಕೋಟಿ ಸಾಲವಿದೆ. ಸದ್ಯಕ್ಕೆ 8% ವೇತನ ಹೆಚ್ಚಳ‌ ಮಾಡುತ್ತೇವೆ. ಆದರೆ ಇದಕ್ಕೆ ಒಪ್ಪದ ನೌಕರರು, ಮುಷ್ಕರ ಮುಂದುವರೆಸಿದ್ದರು. ಬಳಿಕ ಸಿಎಂ ಬೊಮ್ಮಾಯಿ ಅವರು ಶೇಕಡ 15 ರಷ್ಟು ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಮಾರ್ಚ್ ತಿಂಗಳಿನಿಂದಾನೇ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.

Leave a Comment

Your email address will not be published. Required fields are marked *