Student committed to suicide| ಕಡಬ: ಪರೀಕ್ಷೆಗೆ ಹೆದರಿ‌ ಆತ್ಮಹತ್ಯೆಗೆ ಶರಣಾದನಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ? ಕಾಣೆಯಾದವನ ಶವ ಕುಮಾರಧಾರ ನದಿಯಲ್ಲಿ ಪತ್ತೆ!!

ಸಮಗ್ರ ನ್ಯೂಸ್: ಟ್ಯೂಷನ್ ಗೆಂದು ತೆರಳಿ ನಾಪತ್ತೆಯಾಗಿದ್ದ ಹತ್ತನೇ ತರಗತಿಯ ಬಾಲಕನ ಮೃತದೇಹವು ಕಡಬ ತಾಲೂಕಿನ ಪುಳಿಕುಕ್ಕು ಸಮೀಪದ ಕುಮಾರಧಾರಾ ನದಿಯ ನಾಕೂರು ಗಯ ಎಂಬಲ್ಲಿ ಗುರುವಾರ(ಮಾ.30) ಪತ್ತೆಯಾಗಿದೆ.

Ad Widget ... ..

ಕಡಬದ ಖಾಸಗಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅದ್ವೈತ್ ಎಂಬಾತ ಬುಧವಾರ ಟ್ಯೂಷನ್ ಗೆಂದು ತೆರಳಿ ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾನೆ. ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿ ಕಂಡುಬಂದಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಡಿದಾಗ ಮೃತದೇಹವು ಪತ್ತೆಯಾಗಿದೆ.

Ad Widget

ಮಾ. 31ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷಾ ಭಯದಿಂದ ಹೆದರಿ ನದಿಗೆ ಹಾರಿ ಆತ್ಮಹತ್ಯೆಗೆ ಅದ್ವೈತ್ ಶರಣಾದನೇ? ಎಂಬ ಅನುಮಾನ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *