ಕಡಬ: ಹೃದಯಾಘಾತಕ್ಕೆ ಯೋಧ ಬಲಿ| ಇಂದು(ಮಾ.28) ಹುಟ್ಟೂರಿಗೆ ಲಿಜೇಶ್ ಪಾರ್ಥಿವ ಶರೀರ

ಸಮಗ್ರ ನ್ಯೂಸ್: ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ‌ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಯೋಧ ಲಿಜೇಶ್ ಕುರಿಯನ್ ಪಾರ್ಥಿವ ಶರೀರ‌‌ ಇಂದು ಹುಟ್ಟೂರಿಗೆ ಬರಲಿದೆ. ಲಿಜೇಶ್ ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Ad Widget ... ..

ಕುಟ್ರುಪ್ಪಾಡಿ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗನಾಗಿರುವ ಲಿಜೇಶ್ ತಮ್ಮ ಪತ್ನಿ ಜೋಮಿತಾ, ಒಂದು ವರ್ಷದ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Ad Widget

“ಲಿಜೇಶ್ ಪಾರ್ಥಿವ ಶರೀರ ಇಂದು ಬೆಳಗ್ಗೆ ಕಡಬ ತಲುಪಲಿದೆ. 11:30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ ಕ್ಯಾಥೋಲಿಕ್ ಫೋರೋನಾ ದೇವಾಲಯದಲ್ಲಿ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರಲಿದೆ” ಎಂದು ಚರ್ಚ್ ಧರ್ಮಗುರು ಜೋಸ್ ಆಯಂಕುಡಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *