ಬೆಳ್ತಂಗಡಿ: ಅಡಿಕೆ‌ ಮರ ಬಿದ್ದು ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ತಲೆ ಮೇಲೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

Ad Widget ... ..

ಮೃತ ವ್ಯಕ್ತಿಯನ್ನು ಮುಂಡಾಜೆ ಗ್ರಾಮದ ಕುಂಟಾಲಪಳಿಕೆ ನಿವಾಸಿ ಅಣ್ಣು ನಲ್ಕೆ (66) ಎಂದು ಗುರುತಿಸಲಾಗಿದೆ.

Ad Widget

ಇವರು ಕುವೆತ್ಯಾರು ನಿವಾಸಿ ನವೀನ್ ಎಂಬವರ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ತೋಟದ ಹಳೆಯ ಅಡಿಕೆ ಮರಗಳನ್ನು ನೌಫಾಲ್ ಎಂಬರು ಕಡಿಯುತ್ತಿದ್ದರು. ಈ ವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಅಣ್ಣು ಅವರ ತಲೆ ಮೇಲೆ ಬಿದ್ದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *