ಸಮಗ್ರ ನ್ಯೂಸ್: ಏರ್ಪೋರ್ಟ್ ರನ್ವೇ ಬದಿಯಲ್ಲೇ ರಸ್ತೆ ಕುಸಿದಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ.
ಏರ್ರ್ಪೋರ್ಟ್ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಭಾರೀ ಮಳೆ ಮುಂದುವರೆದಿದೆ. ಮಂಗಳೂರು ವಿಮಾನ ನಿಲ್ದಾಣವು ಸೂಕ್ಷ್ಮ ಟೇಬಲ್ ಟಾಪ್ ರನ್ವೇ ಹೊಂದಿರುವುದರಿಂದ ಈ ವಿದ್ಯಮಾನ ದೇಶದ ಗಮನ ಸೆಳೆದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿ ಪದವು ಬಳಿ ಗುಡ್ಡ ಕುಸಿದಿದೆ. ತಡೆಗೋಡೆ ಒಡೆದ ಕಾರಣ ರಸ್ತೆಗೆ ಹೊಂದಿಕೊಂಡಂತೆ ಇರುವ ಗುಡ್ಡದ ಭಾಗವು ಕುಸಿದಿದೆ. ಏರ್ಪೋರ್ಟ್ ರನ್ವೇಯಿಂದ ಹೊರಗೆ ಬಿಡುತ್ತಿರುವ ನೀರಿನಿಂದಾಗಿ ಗುಡ್ಡಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ನೀರು ತುಂಬಿದ್ದು ಸಹ ಗುಡ್ಡ ಕುಸಿತಕ್ಕೆ ಮತ್ತೊಂದು ಕಾರಣ ಎಂದು ಆರೋಪ ಮಾಡಲಾಗಿದೆ.






