ಮಂಗಳೂರು: ಏರ್ ಪೋರ್ಟ್ ರನ್ ವೇ ಸಮೀಪ ರಸ್ತೆ ಕುಸಿತ

ಸಮಗ್ರ ನ್ಯೂಸ್: ಏರ್​ಪೋರ್ಟ್ ರನ್​ವೇ ಬದಿಯಲ್ಲೇ ರಸ್ತೆ ಕುಸಿದಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ.

Ad Widget ... ..

ಏರ್​​ರ್ಪೋರ್ಟ್ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಭಾರೀ ಮಳೆ‌ ಮುಂದುವರೆದಿದೆ. ಮಂಗಳೂರು ವಿಮಾನ ನಿಲ್ದಾಣವು ಸೂಕ್ಷ್ಮ ಟೇಬಲ್ ಟಾಪ್ ರನ್​ವೇ ಹೊಂದಿರುವುದರಿಂದ ಈ ವಿದ್ಯಮಾನ ದೇಶದ ಗಮನ ಸೆಳೆದಿದೆ.

Ad Widget

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿ ಪದವು ಬಳಿ ಗುಡ್ಡ ಕುಸಿದಿದೆ. ತಡೆಗೋಡೆ ಒಡೆದ ಕಾರಣ ರಸ್ತೆಗೆ ಹೊಂದಿಕೊಂಡಂತೆ ಇರುವ ಗುಡ್ಡದ ಭಾಗವು ಕುಸಿದಿದೆ. ಏರ್​ಪೋರ್ಟ್ ರನ್​ವೇಯಿಂದ ಹೊರಗೆ ಬಿಡುತ್ತಿರುವ ನೀರಿನಿಂದಾಗಿ ಗುಡ್ಡಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ನೀರು ತುಂಬಿದ್ದು ಸಹ ಗುಡ್ಡ ಕುಸಿತಕ್ಕೆ ಮತ್ತೊಂದು ಕಾರಣ ಎಂದು ಆರೋಪ ಮಾಡಲಾಗಿದೆ.

Leave a Comment

Your email address will not be published. Required fields are marked *