ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಎಂಟ್ರಿಫೀಸ್ ನೆಪದಲ್ಲಿ ಲಂಚ!!

ಸಮಗ್ರ ನ್ಯೂಸ್: ಪಿಕಪ್ ಚಾಲಕನ ಜೊತೆ ಎಂಟರ್ಪ್ರೀಸ್ ನೆಪದಲ್ಲಿ ಲಂಚ ಕೇಳುತ್ತಿರುವ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget ... ..

ಪಿಕಪ್ ಚಾಲಕನೋರ್ವ ಮಡಿಕೇರಿಯಿಂದ ಭತ್ತದ ಹೊಟ್ಟನ್ನು ಸುಳ್ಯದ ಮರ್ಕಂಜದಲ್ಲಿರುವ ಕೋಳಿ ಫಾರ್ಮಿಗೆ ತರುತ್ತಿರುವಾಗ ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಗಾಡಿಯನ್ನು ಪರಿಶೀಲನೆ ಮಾಡಿದ್ದಾರೆ.

Ad Widget

ಬಳಿಕ ಅಲ್ಲಿರುವ ಅಧಿಕಾರಿಯೊಬ್ಬ ಗಾಡಿಯ ಮಾಹಿತಿಯನ್ನು ಪಡೆದು ನಂತರ ಆತನ ಜೊತೆ ಎಂಟ್ರಿಫೀಸ್ ನೀಡಬೇಕು ಎನ್ನುವ ರೀತಿಯಲ್ಲಿ ಲಂಚ ಕೇಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ಇದೇ ಪಿಕಪ್ ಚಾಲಕನ ಬಳಿ ಈ ಹಿಂದೆಯೂ ಈ ಅಧಿಕಾರ ಇಂತಹ ವರ್ತನೆ ತೋರಿದ್ದು, ಮತ್ತೆ ಎರಡನೇ ಬಾರಿ ಎಂಟ್ರಿಫೀಸ್ ಕೇಳುತ್ತಿರುವುದು ಕಂಡುಬಂದಿದೆ.

ಸಂಪಾಜೆ ಚೆಕ್ ಫೋಸ್ಟ್ ನಲ್ಲಿ ಲಂಚಾವತಾರದ ವಿಡಿಯೋಗಳು ವೈರಲ್ ಆಗಿದ್ದವು. ಇದರಿಂದ ಅರಣ್ಯಾಧಿಕಾರಿಯೋರ್ವರು ಅಮಾನತುಗೊಂಡಿದ್ದು, ಇದಕ್ಕೆ ಈ ಘಟನೆ ಹೊಸ ಸೇರ್ಪಡೆಯಾಗಿದೆ.

Leave a Comment

Your email address will not be published. Required fields are marked *