ಸುಳ್ಯ: ಮೊಬೈಲ್ ಸ್ಪೋಟ; ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಸುಳ್ಯದ ಬೆಳ್ಳಾರೆಯಲ್ಲಿನ ಕೆಳಗಿನ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ನಝೀರ್ ಕಳಂಜ ಅವರ ಮಾಲಕತ್ವದ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ರಿಪೇರಿಗೆಂದು ಬಂದಿದ್ದ ‘ರೆಡ್ಮಿ ಆಂಡ್ರಾಯ್ಡ್’ ಮೊಬೈಲ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡು, ಮೊಬೈಲ್ ಹೊತ್ತಿ ಉರಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

. Ad Widget . Ad Widget . Ad Widget

ಇಂದು ಬೆಳಗ್ಗೆ ಮೊಬೈಲ್ಸ್ ಶಾಪ್ ಗೆ ಮಹಿಳೆಯೋರ್ವರು ಬಂದು ಬ್ಯಾಟರಿ ಸಮಸ್ಯೆ ಇರುವುದಾಗಿ ತಿಳಿಸಿ ರಿಪೇರಿಗೆಂದು ರೆಡ್ಮಿ ಮೊಬೈಲ್ ನೀಡಿದ್ದರು. ಇದು ಆಕಸ್ಮಿಕವಾಗಿ ಸ್ಪೋಟಗೊಂಡು ಹೊತ್ತಿ ಉರಿದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಂಗಡಿ ಮಾಲಕ ರೆಡ್ಮಿ ಮೊಬೈಲ್ ನ ಬ್ಯಾಟರಿ ಸಮಸ್ಯೆಯಿಂದಾಗಿ ಮೊಬೈಲ್ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

. Ad Widget .

Leave a Comment

Your email address will not be published. Required fields are marked *