ಸಮಗ್ರ ನ್ಯೂಸ್: ಭಾರತೀಯ ಸೈನಿಕರಿಗೆ ಗಡಿಯಲ್ಲಿ ಶತ್ರುಗಳ ಜೊತೆಗೆ ಹೋರಾಡಲು ಸೈನಿಕರಿಗೆ ತಿಂಗಳಲ್ಲಿ ಬುಲೆಟ್ ಫ್ರೂಫ್ ಜಾಕೆಟ್ ಗಳು ಸಿಗಲಿದೆ. ಸತತ 9 ವರ್ಷಗಳ ಬಳಿಕ ಇದೀಗ ಸೈನಿಕರ ಕೈ ಗೆ ತಲುಪುವ ದಿನ ಹತ್ತಿರ ಬರಲಿದೆ.
ಬರೋಬ್ಬರಿ 639 ಕೋಟಿ ರೂ.ವೆಚ್ಚದಲ್ಲಿ ತಯಾರಾಗಿರುವ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್‍ಗಳು ಇನ್ನು ಕೆಲವೇ ದಿನದಲ್ಲಿ ಲಕ್ಷ ಸೈನಿಕರ ಕೈ ಸೇರಲಿದೆ.
2009 ಅಕ್ಟೋಬರ್ 16 ರಂದು ಬುಲೆಟ್ ಪ್ರೂಫ್ ಜಾಕೆಟ್ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಪುರಸ್ಕರಿಸಿತ್ತು. ಆದರೆ ಹಲವು ಕಾರಣಗಳಿಂದ ಜಾರಿಯಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಕ್ಷಣಾ ವ್ಯವಸ್ಥೆಗೆ ವಿಶೇಷ ಒತ್ತು ನೀಡಿ, ಸೈನಿಕರಿಗೆ ತೀರ ಅಗತ್ಯವಿರುವ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಕೆಗೆ ಅನುಮತಿ ನೀಡಲಾಗಿತ್ತು.
2016ರಲ್ಲಿ 50,000 ಜಾಕೆಟ್‍ಗಳನ್ನು ತುರ್ತು ಖರೀದಿ ಮಾಡಲಾಗಿದ್ದು, ಅದನ್ನು ಈಗಾಗಲೇ ಸೈನಿಕರಿಗೆ ಹಂಚಲಾಗಿದೆ. ಎಸ್‍ಎಂಪಿಪಿ ಪ್ರೈವೆಟ್ ಲಿಮಿಟೆಡ್ ಕಳೆದ ವರ್ಷ ಈ ಬುಲೆಟ್ ಪ್ರೂಫ್ ಜಾಕೆಟ್‍ಗಳ ಪರಿಶೀಲನೆಗೊಳಪಡಿಸಿತ್ತು. ಇದೀಗ ಎಲ್ಲಾ ಹಂತ ಮುಗಿದಿದ್ದು, ಕೆಲವೇ ದಿನದಲ್ಲಿ ಬುಲೆಟ್ ಫ್ರೂಫ್ ಜಾಕೆಟ್ ಸೈನಿಕರ ಕೈಸೇರಲಿದೆ.







