ಸಮಗ್ರ ನ್ಯೂಸ್: ದೇಶದಲ್ಲಿ ಬಹುತೇಕ ರೈಲುಗಳ ಸಂಚಾರವನ್ನು ಕಲ್ಲಿದ್ದಲು ಕೊರತೆಯಿಂದಾಗಿ ರದ್ದುಗೊಳಿಸಲು ಇದೀಗ ರೈಲ್ವೆ ಇಲಾಖೆ ನಿರ್ಧರಿಸಿದೆ. ಕಲ್ಲಿದ್ದಲು ಸಾಗಣೆ ವೇಗವನ್ನು ಹೆಚ್ಚಿಸಲು ರೈಲ್ವೆ ಮೇ 24 ರವರೆಗೆ 1100 ರೈಲುಗಳನ್ನು ರದ್ದು ಮಾಡಿದೆ.
ಇದೀಗ ವಿದ್ಯುತ್ ಶಕ್ತಿಯ ಬೇಡಿಕೆಯು ತ್ವರಿತವಾಗಿ ಏರಿಕೆಯಾಗಿದೆ. ಜೊತೆಗೆ ಏಪ್ರಿಲ್‌ನಿಂದ ಕಲ್ಲಿದ್ದಲು ಕೊರತೆ ತೀವ್ರಗೊಂಡಿದೆ. ಕೆಲವೇ ದಿನಗಳಲ್ಲಿ ರಾಷ್ಟ್ರದೊಳಗೆ ಕೇವಲ 2-ಮೂರು ದಿನಗಳ ಕಲ್ಲಿದ್ದಲು ಮಾತ್ರ ಉಳಿದಿದೆ. ಹೀಗಾಗಿ ರೈಲ್ವೇಯು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಕಲ್ಲಿದ್ದಲು ರೈಲುಗಳ ಚಲನೆಯನ್ನು ಹೆಚ್ಚಿಸಿದೆ.
ಇದರ ಪರಿಣಾಮವಾಗಿ ಕಲ್ಲಿದ್ದಲು ರೈಲುಗಳ ಚಲನೆಯನ್ನು ಈಗ ಸುಗಮಗೊಳಿಸಲಾಗಿದೆ. ಇದರ ಪರಿಣಾಮವಾಗಿ ಕೆಲವು ದಿನಗಳವರೆಗೆ ಪ್ರಯಾಣಿಕರ ಕೆಲ ರೈಲು ಸಂಚಾರಕ್ಕೆ ಬ್ರೇಕ್ ಬೀಳಲಿದೆ. ದೇಶದ ವಿವಿಧ ರಾಜ್ಯಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.







