Ad Widget .

ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು| ಸ್ವಪಕ್ಷೀಯ ಸಚಿವರ ವಿರುದ್ಧವೇ ಯತ್ನಾಳ್ ವ್ಯಂಗ್ಯ

ವಿಜಯಪುರ : ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆ ಗೃಹ ಸಚಿವರು ತೋರುತ್ತಿರುವ ಸಾಫ್ಟ್​ ಕಾರ್ನರ್ ನೋಡಿದರೆ ರಾಜ್ಯಕ್ಕೆ ಗೃಹಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ಹೊರಡಿಸುವುದು ಉತ್ತಮ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು,​ ಸ್ವಪಕ್ಷಿಯ ಸಚಿವರ ಮೇಲೆಯೇ ವ್ಯಂಗ್ಯವಾಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯದಲ್ಲಿ ಒಂದಲ್ಲ ಒಂದು ಗಲಭೆಗಳು ನಡೆಯುತ್ತಲೇ ಇದೆ. ಎಲ್ಲೂ ಗಲಾಟೆ ಆಗ್ತಿಲ್ಲ ರಾಜ್ಯದಲ್ಲಿ ಮಾತ್ರ ಗಲಾಟೆ ಆಗ್ತಿದೆ. ಗೃಹ ಇಲಾಖೆ ಎಲ್ಲೆಲ್ಲಿ ವೀಕ್ ಇದೆಯೋ ಅಲ್ಲಲ್ಲಿ ಗಲಾಟೆಗಳು ನಡೆಯುತ್ತೆ.

Ad Widget . Ad Widget . Ad Widget .

ನಿನ್ನೆ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಎಲ್ಲ ನಾಯಕರಿಗೂ ಸ್ಪಷ್ಟ ಸಂದೇಶ ನೀಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಪಕ್ಷ ಅಧಿಕಾರಕ್ಕೆ ಬರಲು ನಾಯಕರು ಮನೆ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ತಲುಪಿಸಬೇಕು ಎಂದು ಸೂಚನೆ ನೀಡಿದ್ದಾರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಸ್ಟ್ರಾಂಗ್​ ಗೃಹಸಚಿವರು ಬೇಕಾಗಿದ್ದಾರೆ:

ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಗೃಹ ಇಲಾಖೆ ಎಲ್ಲೆಲ್ಲಿ ವೀಕ್​ ಇದೆ ಅಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಹೀಗಾಗಿ, ರಾಜ್ಯಕ್ಕೆ ಒಬ್ಬ ಸಮರ್ಥ, ಸ್ಟ್ರಾಂಗ್​ ಗೃಹಸಚಿವರು ಬೇಕಾಗಿದ್ದಾರೆ. ಈ ಕಾರಣಕ್ಕೆ ಗೃಹಸಚಿವರು ಬೇಕಾಗಿದ್ದಾರೆ ಎಂದು ಪ್ರಕಟಣೆ ನೀಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆ:

ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಗಾಗಲೇ ಉಳಿದ ಸ್ಥಾನಗಳನ್ನು ಶೀಘ್ರ ತುಂಬಲು ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ನಿನ್ನೆ ಸಹ ಕಾರ್ಯಕಾರಣಿಯಲ್ಲಿ ಚರ್ಚೆಯಾಗಿದೆ. ಇದೇ ತಿಂಗಳು ಅಂತ್ಯದೊಳಗಾಗಿ ಸಂಪುಟ ವಿಸ್ತರಣೆ ಮಾಡುವುದು ಬಹುತೇಕ ಖಚಿತವಾಗಿದೆ. ಹಿರಿಯರನ್ನು ಕೈ ಬಿಡುವ ವಿಚಾರ ನನಗೆ ಗೊತ್ತಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ್ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಪದೇಪದೇ ಉಂಟಾಗುತ್ತಿರುವ ಅರಾಜಕತೆ ತಡೆಯಲು ಸರ್ಚ್‌ ಆಪರೇಷನ್ ಅವಶ್ಯಕವಿದೆ. ಯಾರ ಬಳಿ ಗನ್, ತಲ್ವಾರ್ ಇದೆ, ಮನೆಯ ಮೇಲೆ ಕಲ್ಲು ಇಟ್ಟುಕೊಂಡಿರುತ್ತಾರೆ ಎನ್ನುವುದು ಗುಪ್ತಚರ ಇಲಾಖೆಗೆ ಮಾಹಿತಿ ಇರುತ್ತದೆ. ಅದನ್ನು ಸರ್ಚ್‌ ಆಪರೇಷನ್ ಮೂಲಕ ಕಂಡು ಹಿಡಿಯಬೇಕು. ಗೃಹಸಚಿವರು ಕಾರ್ಯಪ್ರವೃತರಾಗಬೇಕು ಎಂದರು.

Leave a Comment

Your email address will not be published. Required fields are marked *