ಸುಳ್ಯ: ನಿಯಂತ್ರಣ ತಪ್ಪಿದ ಕಾರು ಪಲ್ಟಿ; ನಾಲ್ಕು ಮಂದಿ ಜಖಂ

Ad Widget ... ..

ಸಮಗ್ರ ನ್ಯೂಸ್: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸುಳ್ಯದ ಹಳೆಗೇಟು ಬೆಟ್ಟಂಪಾಡಿ ಮೂಲದ ನಾಲ್ವರು ಗಾಯಗೊಂಡ ಘಟನೆ ಇಂದು ವರದಿಯಾಗಿದೆ.

Ad Widget

ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್ ಎಂಬುವವರು ತಮ್ಮ ಸಂಬಂಧಿಕರನ್ನು ವಿದೇಶಕ್ಕೆ ಬೀಳ್ಕೊಡಲು ಕಣ್ಣೂರು ಏರ್ಪೋರ್ಟಿಗೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಕಾರಿನಲ್ಲಿ ಚಾಲಕ ಶರೀಫ್ ಹಾಗೂ ಬಶೀರ್, ಅವರ ಪತ್ನಿ, ಮತ್ತೋರ್ವ ಕುಟುಂಬದ ಮಹಿಳೆ, ಹಾಗೂ ಏಳು ವರ್ಷದ ಮಗುವೊಂದು ಇದ್ದರು.
ಕಾರು ಅಪಘಾತದಿಂದ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *