ಅಮರಾವತಿ: ಆಂಧ್ರಪ್ರದೇಶದಲ್ಲಿ ಪ್ರಮುಖ ಆಡಳಿತ ಸುಧಾರಣೆ ತರಲು ಜಗನ್ ಮೋಹನ್ ರೆಡ್ಡಿ ಸರ್ಕಾರ ಇಂದು ಬೆಳಿಗ್ಗೆ 13 ಹೊಸ ಜಿಲ್ಲೆಗಳ ರಚನೆಗೆ ಅಧಿಸೂಚನೆಯನ್ನು ಹೊರಡಿಸಿದೆ.
ಆಡಳಿತವನ್ನು ಸರಾಗಗೊಳಿಸಲು ಮತ್ತು ಅಧಿಕಾರಿಗಳ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ 13 ಜಿಲ್ಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. 25 ಲೋಕಸಭಾ ಕ್ಷೇತ್ರಗಳನ್ನು ಪ್ರತಿಯೊಂದನ್ನು ಜಿಲ್ಲೆಯಾಗಿ ಪುನಾರಚಿಸಲಾಗಿದೆ. ಅರಕು ಕ್ಷೇತ್ರವನ್ನು ನಾಲ್ಕು ಕ್ಷೇತ್ರಗಳಾಗಿ ರಚಿಸಲಾಗಿದೆ.
ಆಂಧ್ರಪ್ರದೇಶ ಜಿಲ್ಲೆಗಳ ರಚನೆ ಕಾಯ್ದೆಯ ಸೆಕ್ಷನ್ 3(5) ಅಡಿ ಜಿಲ್ಲೆಗಳನ್ನು ರಚನೆ ಮಾಡಲಾಗಿದ್ದು, ಈ ಮೂಲಕ ಆಂಧ್ರಪ್ರದೇಶದಲ್ಲಿನ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್ಟಿಆರ್, ಅನಕಾಪಲ್ಲಿ, ಕಾಕಿನಾಡ, ಕೋನಾ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು ನೂತನ ಜಿಲ್ಲೆಗಳಾಗಿದೆ.
ಮುಂದಿನ ಯುಗಾದಿ ಹಬ್ಬದ ವೇಳೆಗೆ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬೇಕೆಂದು ಆಂಧ್ರಪ್ರದೇಶ ಸರ್ಕಾರ ಗುರಿ ಹೊಂದಿದೆ. ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಗಳು, ಮತ್ತು ಸೌಲಭ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.