ರಶ್ಮಿಕಾಳ ಹೊಸ ಅವತಾರಕ್ಕೆ ಟ್ರೋಲ್| ‘ನಿಂಗೆ ಚಳಿ‌ ಆಗಲ್ವಾ?’ ಎಂದ ನೆಟ್ಟಿಗರು

ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣಗೆ ಆನ್ಲೈನ್‌ನಲ್ಲಿ ಪಡ್ಡೆ ಹುಡುಗರ ಫಾಲೋಯಿಂಗ್ ದಿನೇ ದಿನೇ ಏರುತ್ತಲೇ ಇದೆ.

Ad Widget ... ..

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಾಕುವ ಫೋಟೋಗಳು ಭಾರೀ ವೈರಲ್ ಆಗಿ ಪಡ್ಡೆ ಹುಡುಗರ ಎದೆಗೆ ಬೆಂಕಿ ಇಡುತ್ತವೆ. 3-4 ವರ್ಷಗಳ ಹಿಂದೆ ಸ್ಟೇಟ್ ಕ್ರಶ್ ಆಗಿ ಈಗ ನ್ಯಾಷನಲ್ ಕ್ರಶ್ ಎಂಬ ಬಿರುದಾಂಕಿತಳಾದ ರಶ್ಮಿಕಾ ಇತ್ತೀಚೆಗೆ ಪುಷ್ಪ ಚಿತ್ರದ ಯಶಸ್ಸಿನಿಂದ ತನ್ನ ವೃತ್ತಿಯ ಗ್ರಾಫ್‌ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

Ad Widget

ಮೊದಲೇ ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿಯಾಗುವ ರಶ್ಮಿಕಾ ಈಗ ತನ್ನ ಧಿರಿಸಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ. ವಿಮಾನ ನಿಲ್ದಾಣದಿಂದ ಇಳಿದು ಬರುವ ವೇಳೆ ಬಿಳಿಯ ಫ್ಲಿಪ್‌-ಫ್ಲಾಪ್‌ಗಳು, ಲೈಲಾಕ್ ಟೋಪಿ, ಕಪ್ಪು ಬಣ್ಣದ ಮಾಸ್ಕ್‌ ಹಾಕಿಕೊಂಡು ಕ್ಯಾಮೆರಾಗಳಿಗೆ ಪೋಸ್ ಕೊಟ್ಟ ರಶ್ಮಿಕಾ ತನ್ನ ಈ ಡ್ರೆಸ್‌ಗೂ ಭಾರೀ ಸುದ್ದಿಯಲ್ಲಿದ್ದಾರೆ.

ರಶ್ಮಿಕಾಳ ಈ ಅವತಾರ ಕಂಡ ಕೆಲ ನೆಟ್ಟಿಗರು, “ಈಕೆಗೆ ಚಳಿಯಾಗುತ್ತಿಲ್ಲವಾ?” ಎಂದು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು, “ಆಕೆ ಪ್ಯಾಂಟ್ ಹಾಕುವುದು ಮರೆತಿದ್ದಾಳೆ,” ಎಂದಿದ್ದಾರೆ.

ನಟ ಸಿದ್ದಾರ್ಥ ಮಲ್ಹೋತ್ರಾ ಜೊತೆಗೆ ‘ಮಿಶನ್ ಮಜ್ನು’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲು ರಶ್ಮಿಕಾ ಸನ್ನದ್ಧರಾಗಿದ್ದಾರೆ.

Leave a Comment

Your email address will not be published. Required fields are marked *