ಮಂಗಳೂರು: ವಿಮಾನ ನಿಲ್ದಾಣಕ್ಕೆ ನಾಡಕೋವಿ ತಂದವ ಅಂದರ್

Ad Widget ... ..

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕಾರಿನಲ್ಲಿ ಅಕ್ರಮವಾಗಿ ನಾಡಕೋವಿ ಇರಿಸಿಕೊಂಡಿದ್ದ ಯುವಕನನ್ನು ಸಿಐಎಸ್‌ಎಫ್ ಭದ್ರತಾ ಸಿಬಂದಿ ಬಂಧಿಸಿದ್ದಾರೆ.

Ad Widget

ಬ್ರಹ್ಮಾವರ ಮೂಲದ ರೆನಾಲ್ಡ್ ಡಿಸೋಜ(24) ಬಂಧಿತ ಯುವಕ. ಈತ ವಿದೇಶದಿಂದ ಬಂದಿದ್ದ ತನ್ನ ಸಂಬಂಧಿಕ ವ್ಯಕ್ತಿಯನ್ನು ಕಾರಿನಲ್ಲಿ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಕಾರನ್ನು ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿದ್ದಾಗ ಸಿಐಎಸ್‌ಎಫ್ ಭದ್ರತಾ ಸಿಬಂದಿ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ, ಕಾರಿನ ಮುಂಭಾಗದಲ್ಲಿ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಪತ್ತೆಯಾಗಿದ್ದು ಈ ಬಗ್ಗೆ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಗನ್ ಹೊಂದಿರುವುದಕ್ಕೆ ಲೈಸನ್ಸ್ ಇಲ್ಲದ ಕಾರಣ ಯುವಕನನ್ನು ಭದ್ರತಾ ಸಿಬಂದಿ ವಶಕ್ಕೆ ಪಡೆದಿದ್ದು, ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಕೋರ್ಟಿಗೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Comment

Your email address will not be published. Required fields are marked *