2022 ರ ಸರ್ಕಾರಿ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ|

Ad Widget ... ..

2022ನೇ ಸಾಲಿಗೆ ಸರ್ಕಾರಿ ಸಿಬ್ಬಂದಿಗೆ ಕರ್ನಾಟಕ ಸರ್ಕಾರದಿಂದ ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Ad Widget

ಕರ್ನಾಟಕ ಸರ್ಕಾರವು ನವೆಂಬರ್ 30ನೇ ತಾರೀಕಿನಂದು 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಸಿಬ್ಬಂದಿಗೆ ರಜಾ ಇರುತ್ತದೆ. ಅದನ್ನು ಹೊರತುಪಡಿಸಿದಂತೆ ಇರುವ ರಜಾ ದಿನಗಳು ಈ ಕೆಳಗಿನಂತಿವೆ:

15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
26-1-2022: ಬುಧವಾರ- ಗಣರಾಜ್ಯೋತ್ಸವ
1-3-202022: ಮಂಗಳವಾರ- ಮಹಾ ಶಿವರಾತ್ರಿ
2-4-2022: ಶನಿವಾರ- ಯುಗಾದಿ ಹಬ್ಬ
14-4-20222: ಗುರುವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
15-4-2022: ಶುಕ್ರವಾರ- ಗುಡ್​ಫ್ರೈಡೇ
3-5-2022: ಮಂಗಳವಾರ- ಬಸವೇಶ್ವರ ಜಯಂತಿ/ಅಕ್ಷಯ ತೃತೀಯ, ಖುತುಬ್-ಎ-ರಂಜಾನ್
9-8-2022: ಬುಧವಾರ- ಮೊಹರಂ ಕಡೇ ದಿನ
15-8-2022: ಸೋಮವಾರ- ಸ್ವಾತಂತ್ರ್ಯ ದಿನಾಚರಣೆ
31-8-2022: ಬುಧವಾರ- ವರಸಿದ್ಧಿ ವಿನಾಯಕ ವ್ರತ
4-10-2022: ಮಂಗಳವಾರ- ಮಹಾನವಮಿ, ಆಯುಧಪೂಜೆ
5-10-2022: ಬುಧವಾರ- ವಿಜಯದಶಮಿ
24-10-2022: ಸೋಮವಾರ- ನರಕ ಚತುರ್ದಶಿ
26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ
1-11-2022: ಮಂಗಳವಾರ- ಕನ್ನಡ ರಾಜ್ಯೋತ್ಸವ
11-11-2022: ಶುಕ್ರವಾರ- ಕನಕದಾಸ ಜಯಂತಿ

ಕರ್ನಾಟಕ ರಾಜ್ಯ ಸರ್ಕಾರದ ಪರಿಮಿತ ರಜಾ ದಿನಗಳ ಪಟ್ಟಿ

ಅಂದಹಾಗೆ ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಬಕ್ರೀದ್ (ಜುಲೈ 10), ಮಹಾಲಯ ಅಮಾವಾಸ್ಯೆ (ಸೆಪ್ಟೆಂಬರ್ 25), ಗಾಂಧೀ ಜಯಂತಿ (ಅಕ್ಟೋಬರ್ 2), ಮಹರ್ಷಿ ವಾಲ್ಮೀಕಿ ಜಯಂತಿ/ ಈದ್ ಮಿಲಾದ್ (ಅಕ್ಟೋಬರ್ 9) ಮತ್ತು ಕ್ರಿಸ್​ಮಸ್ (ಡಿಸೆಂಬರ್ 25) ಒಳಗೊಂಡಿಲ್ಲ). ಮುಸಲ್ಮಾನರಿಗೆ ಆಯಾ ನಿಗದಿತ ದಿನಾಂಕದ ಬದಲಿಗೆ ಬೇರೆ ದಿನ ಹಬ್ಬ ಬಂದಲ್ಲಿ ಆ ದಿನ ರಜಾ ನೀಡಬಹುದು. ಇನ್ನು ಸೆಪ್ಟೆಂಬರ್ 3 ಕೈಲ್ ಮುಹೂರ್ತ ಹಾಗೂ ಡಿಸೆಂಬರ್ 8 ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜಾ ಘೋಷಣೆ ಮಾಡಲಾಗಿದೆ.

Leave a Comment

Your email address will not be published. Required fields are marked *