November 2026

ಸುಬ್ರಹ್ಮಣ್ಯ: ಆತ್ಮಹತ್ಯೆಗೆಂದು ನದಿಗೆ ಹಾರಿದ ಮಹಿಳೆಗೆ ಮೊಸಳೆಯಿಂದ‌ ಜೀವದಾನ

ಸಮಗ್ರ ನ್ಯೂಸ್: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿದ ಪರಿಣಾಮ, ಆಕೆ ಜೀವ ಭಯದಿಂದ ಚೀರಿ ಬದುಕಿ ಬಂದ ವಿಚಿತ್ರ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನವೆಂಬರ್ 4 ರ ತಡರಾತ್ರಿ ಸಂಭವಿಸಿದೆ. ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ನವೆಂಬರ್ 4 ರ ತಡರಾತ್ರಿ ಕುಮಾರಧಾರಾ ನದಿ ಸೇತುವೆ ಮೇಲಿಂದ ನೀರಿಗೆ ಹಾರಿದ್ದರು. ಮಹಿಳೆ

ಸುಬ್ರಹ್ಮಣ್ಯ: ಆತ್ಮಹತ್ಯೆಗೆಂದು ನದಿಗೆ ಹಾರಿದ ಮಹಿಳೆಗೆ ಮೊಸಳೆಯಿಂದ‌ ಜೀವದಾನ Read More »

ಸುಬ್ರಹ್ಮಣ್ಯ: ಮಹಿಳೆಯ ಕೊಲೆ ಯತ್ನ; ಆರೋಪಿಯ ಬಂಧನ

ಸಮಗ್ರ ನ್ಯೂಸ್: ಕಬ್ಬಿಣದ ರಾಡ್‌ನಿಂದ ಹೊಡೆದು ಮಹಿಳೆಯ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಕಡಬ ತಾಲ್ಲೂಕು ಕೊಣಾಜೆ ಗ್ರಾಮದ ಪ್ರಸಾದ್‌ನನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಮಹಿಳೆಗೂ ಪ್ರಸಾದ್‌ನಿಗೂ ಮೂರು ವರ್ಷಗಳಿಂದ ಪರಿಚಯವಿದ್ದು ಗೆಳೆತನವಿತ್ತು. ನ.4ರಂದು ಸಂಜೆ ಮಹಿಳೆಯನ್ನು ಉಪ್ಪಿನಂಗಡಿಯಿಂದ ಕಾರಿನಲ್ಲಿ ಕರೆದುಕೊಂಡು ಕುಲ್ಕುಂದ ಮೂಲಕ ಬಿಸಿಲೆ ಘಾಟ್ ಕಡೆಗೆ ಹೋದ ಪ್ರಸಾದ್ ದಾರಿಮಧ್ಯೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಜ್ಞೆ ತಪ್ಪಿ ಕಾಡಿನೊಳಗೆ ಬಿದ್ದ ಮಹಿಳೆಗೆ ಮರುದಿನ

ಸುಬ್ರಹ್ಮಣ್ಯ: ಮಹಿಳೆಯ ಕೊಲೆ ಯತ್ನ; ಆರೋಪಿಯ ಬಂಧನ Read More »

ಬೆಂಗಳೂರು: ಕೌಟುಂಬಿಕ ಕಲಹಕ್ಕೆ 7 ಮಂದಿಯನ್ನು ಕೊಲೆಗೈದ ಕ್ಯಾಬ್ ಚಾಲಕ

ಸಮಗ್ರ ನ್ಯೂಸ್: ಕೌಟುಂಬಿಕ ಕಲಹ ಹಾಗೂ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿ ಸೇರಿದಂತೆ ಒಟ್ಟು 7 ಜನರನ್ನು ರುಬ್ಬುಗುಂಡಿನಿಂದ ಹೊಡೆದು ಕ್ರೂರವಾಗಿ ಹತ್ಯೆಗೈದಿರುವ ನಡುಕ ಹುಟ್ಟಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಶ್ರೀರಾಮಪುರದ ನಿವಾಸಿ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್, ಶಂಕರ್, ಸೊಸೆಯಂದಿರಾದ ದಿವ್ಯಾ, ನಳಿನಿ ಹಾಗೂ 7 ವರ್ಷದ ಮೊಮ್ಮಗ ಪುನೀತ್ ಕೊಲೆಯಾದ ದುರ್ದೈವಿಗಳು. ಈ ಭೀಕರ ಸರಣಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೃತರ

ಬೆಂಗಳೂರು: ಕೌಟುಂಬಿಕ ಕಲಹಕ್ಕೆ 7 ಮಂದಿಯನ್ನು ಕೊಲೆಗೈದ ಕ್ಯಾಬ್ ಚಾಲಕ Read More »

ದೀಪಾವಳಿಗೆ ಕಾಡಲಿದ್ದಾನೆ ವರುಣ| ಮತ್ತೆ ಏಳು ದಿನ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಅದರಲ್ಲೂ ನವೆಂಬರ್‌ 5 ಮತ್ತು 6ರಂದು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಅಲ್ಲಲ್ಲಿ

ದೀಪಾವಳಿಗೆ ಕಾಡಲಿದ್ದಾನೆ ವರುಣ| ಮತ್ತೆ ಏಳು ದಿನ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ Read More »

ಇಂದು ರಾಜ್ಯ ಸರ್ಕಾರದಿಂದ ರೈತರಿಗೆ ಬರಪರಿಹಾರ ಹಣ ಬಿಡುಗಡೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಈ ಬಾರಿ ರೈತರು ಸೇರಿದಂತೆ ಜನಸಾಮಾನ್ಯರು ಸಹ ಭೀಕರ ಬರಗಾಲ ಎದುರಿಸುತ್ತಿದ್ದು, ಒಂದೆಡೆ ಜನಸಾಮಾನ್ಯರು ದಿನಬಳಕೆ ವಸ್ತು ಖರೀದಿಸಲು ಪರದಾಡುತ್ತಿದ್ದರೆ, ಮತ್ತೊಂದೆಡೆ ಸರಿಯಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿದ್ದ ರೈತರಿಗೆ ಇಂದು ಬರ ಪರಿಹಾರದ ಹಣ ವಿತರಣೆಯಾಗಲಿದೆ. ಇಂದು ಮಧ್ಯಂತರ ಬೆಳೆ ಪರಿಹಾರದ ಹಣ ಸಿಎಂ ಡಿಕೆ ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12:15ಕ್ಕೆ ವಿಧಾನಸೌಧದಲ್ಲಿ ಪರಿಹಾರ ವಿತರಣೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ತುರ್ತು ಬೆಳೆ

ಇಂದು ರಾಜ್ಯ ಸರ್ಕಾರದಿಂದ ರೈತರಿಗೆ ಬರಪರಿಹಾರ ಹಣ ಬಿಡುಗಡೆ Read More »

ರಾಜ್ಯದ ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಪ್ಟ್| ಮೂರು ಕಂತಿನ ಹಣ‌ ಒಟ್ಟು ಬಿಡುಗಡೆ

ಸಮಗ್ರ ನ್ಯೂಸ್: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಹಬ್ಬಕ್ಕೆ ಬಂಪರ್​​​ ಗುಡ್​ ನ್ಯೂಸ್​ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಸರ್ಕಾರ ಒಟ್ಟಿಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಒಟ್ಟು ₹7,405.86 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಪ್ರತಿ ತಿಂಗಳು

ರಾಜ್ಯದ ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಪ್ಟ್| ಮೂರು ಕಂತಿನ ಹಣ‌ ಒಟ್ಟು ಬಿಡುಗಡೆ Read More »

ರಾಮಮಂದಿರದಿಂದ 2.7 ಕೋಟಿ ಹುಂಡಿ ಹಣ ಕಳವು| ಎಸ್ಐಟಿ‌ ತನಿಖೆಯಿಂದ ಕೃತ್ಯ ಬಯಲು

ಸಮಗ್ರ ನ್ಯೂಸ್: ಅಯೋಧ್ಯೆಯ ಶ್ರೀ ರಾಮಮಂದಿರದ ಹುಂಡಿಯಿಂದ ಸುಮಾರು 2.7 ಕೋಟಿ ರೂಪಾಯಿ ದೇಣಿಗೆ ಹಣ ದುರುಪಯೋಗ ಅಥವಾ ಕಳ್ಳತನವಾಗಿರುವುದು ವಿಶೇಷ ತನಿಖಾ ತಂಡದ ತನಿಖೆಯಿಂದ ಹೊರಬಂದಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಈ ಕುರಿತು ಸುಪ್ರೀಂ ಕೋರ್ಟ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ವಿಚಾರಣಾ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದ ಮೇಲೆ ವಾದ ಮಂಡಿಸಿದ ಅವರು, ಕಳ್ಳತನ ಮಾಡಿದ ಈ ಹಣದಿಂದ ಆರೋಪಿಗಳು ಬೇರೆ ಬೇರೆ ಕಡೆ ಆಸ್ತಿ ಮತ್ತು ಚಿನ್ನ

ರಾಮಮಂದಿರದಿಂದ 2.7 ಕೋಟಿ ಹುಂಡಿ ಹಣ ಕಳವು| ಎಸ್ಐಟಿ‌ ತನಿಖೆಯಿಂದ ಕೃತ್ಯ ಬಯಲು Read More »

ಟ್ರಂಪ್ ಗೆ ಮಧ್ಯಂತರ ಚುನಾವಣೆ ಶಾಕ್| ಅಮೇರಿಕಾದಲ್ಲಿ ಅಧಿಕಾರಕ್ಕೆ ಸವಾಲು

ಸಮಗ್ರ ನ್ಯೂಸ್: ಅಮೆರಿಕದಲ್ಲಿ ಮತ್ತೊಮ್ಮೆ ರಾಜಕೀಯ ಸಮರ ಶುರುವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಕ್ಕೆ ಸವಾಲೊಡ್ಡುವ ಸೂಚನೆ ಮಧ್ಯಂತರ ಚುನಾವಣೆಯ ಆರಂಭಿಕ ಫಲಿತಾಂಶಗಳಲ್ಲಿ ಕಾಣಿಸುತ್ತಿದೆ. ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳೆಂದೇ ಗುರುತಿಸಿಕೊಂಡಿದ್ದ ಹಲವು ಕ್ಷೇತ್ರಗಳಲ್ಲಿ ಡೆಮೋಕ್ರಾಟ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವುದು ಟ್ರಂಪ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಜೀವನ ವೆಚ್ಚದ ಏರಿಕೆ, ಇರಾನ್ ವಿರುದ್ಧದ ಯುದ್ಧ ಮತ್ತು ಟ್ರಂಪ್ ಆಡಳಿತದ ನೀತಿಗಳ ಬಗ್ಗೆ ಜನರ ಅಸಮಾಧಾನ ಮತಗಳಾಗಿ ಪರಿವರ್ತನೆಯಾಗುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ. ಈ ಚುನಾವಣೆಯಲ್ಲಿ ಡೆಮೋಕ್ರಾಟ್‌ಗಳು ಗೆದ್ದರೆ

ಟ್ರಂಪ್ ಗೆ ಮಧ್ಯಂತರ ಚುನಾವಣೆ ಶಾಕ್| ಅಮೇರಿಕಾದಲ್ಲಿ ಅಧಿಕಾರಕ್ಕೆ ಸವಾಲು Read More »

Woman Arrested For Supplying MDMA in Mangaluru, 153 Grams Seized

Samagra News: Mangaluru North police have arrested a 42-year-old woman on charges of supplying MDMA to youths and students across Mangaluru city and seized 153 grams of the synthetic drug, valued at Rs 15.30 lakh, from her apartment. Police said that the arrested woman has been identified as Naseema, of Laila village of Belthangady taluk

Woman Arrested For Supplying MDMA in Mangaluru, 153 Grams Seized Read More »

ಕಾಸರಗೋಡು: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರರು ಸಾವು

ಸಮಗ್ರ ನ್ಯೂಸ್: ಕಾಸರಗೋಡಿನ ಪಡನ್ನಕ್ಕಾಡ್‌ನ ನೆಹರೂ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಿಲ್ಲಿಸಲಾಗಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.ಮೃತರನ್ನು ನೀಲೇಶ್ವರದ ಪಡಿಂಜಾಟಂ ಕೊಳುವಲ್ ನಿವಾಸಿಗಳಾದ ಅನುರಾಗ್ (22) ಮತ್ತು ಆನಂದಕೃಷ್ಣನ್ (24) ಎಂದು ಗುರುತಿಸಲಾಗಿದೆ. ಕಾಞಂಗಾಡ್‌ನ ತಿರುವತ್ತ್ ಅರಯಿಲ್ ಭಗವತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ತೆಯ್ಯಂ ನೋಡಲು ಇಬ್ಬರೂ ನೀಲೇಶ್ವರದಿಂದ ಬೈಕ್‌ನಲ್ಲಿ ತೆರಳುತ್ತಿದ್ದರು. ರಾತ್ರಿ 9 ಗಂಟೆಯ ಸುಮಾರಿಗೆ ಪಡನ್ನಕ್ಕಾಡ್‌ನಲ್ಲಿ ಈ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ

ಕಾಸರಗೋಡು: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರರು ಸಾವು Read More »