ಕುಕ್ಕೆ ಸುಬ್ರಹ್ಮಣ್ಯ: ಈ ನಾಲ್ಕು ದಿನಗಳಂದು ಹಲವು ಸೇವೆಗಳು ಅಲಭ್ಯ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ, ದಶಮಿ ಏಕಾದಶಿ ಪ್ರಯುಕ್ತ ಸೆಪ್ಟೆಂಬರ್ 3, 4, 6 ಮತ್ತು 7ರಂದು ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ.

. Ad Widget . Ad Widget

ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು, ಸೆಪ್ಟೆಂಬರ್ 7ರಂದು ಏಕಾದಶಿ ದಿನದಂದು ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಮಹಾಭಿಷೇಕ ನೆರವೇರುವುದಿಲ್ಲ.

. Ad Widget . . Ad Widget . Ad Widget

ಮಹಾಪೂಜೆ, ಶೇಷ ಸೇವೆ, ಅಭಿಷೇಕಗಳು, ಅರ್ಚನೆ ಸೇವೆಗಳು ಮತ್ತು ದೇವರ ದರ್ಶನ ಎಂದಿನಂತೆ ನೆರವೇರಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 3 ಮತ್ತು 4ರಂದು ಹಾಗೂ ದಶಮಿ ಏಕಾದಶಿ ಪ್ರಯುಕ್ತ ಸೆಪ್ಟೆಂಬರ್ 6 ಮತ್ತು 7ರಂದು ಸರ್ಪ ಸಂಸ್ಕಾರ ಸೇವೆ ನಡೆಯುವುದಿಲ್ಲ. ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಮತ್ತು ಸೆಪ್ಟೆಂಬರ್ 7ರಂದು ಏಕಾದಶಿಯ ದಿನ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಮಹಾಭಿಷೇಕ ನಡೆಯುವುದಿಲ್ಲ. ಮಹಾಪೂಜೆ, ಶೇಷ ಸೇವೆ, ಅಭಿಷೇಕ, ಅರ್ಚನೆ ಸೇವೆಗಳು, ದೇವರ ದರ್ಶನ ಎಂದಿನಂತೆ ಇರುತ್ತದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *